ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೆ ಗಾಂಧಿನಗರಿಗೆ ಮರಳಿದ ಒಂದಾನೊಂದು ಕಾಲದ ಚಂದ್ರಿಕಾ! (Chandrika | Jaijagadeesh | Puttanna Kanagal)
ಸುದ್ದಿ/ಗಾಸಿಪ್
Feedback Print Bookmark and Share
 
ಒಂದಾನೊಂದು ಕಾಲದಲ್ಲಿ ಸ್ಯಾಂಡಲ್‌ವುಡ್ಡಿನಲ್ಲಿ ಮಿಂಚಿ, ಮರೆಯಾಗಿದ್ದ ನಟಿಮಣಿಯರು ಈಗ ಒಬ್ಬೊಬ್ಬರಾಗಿಯೇ ರಿ-ಎಂಟ್ರಿ ಕೊಡುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆಗಳೆಂದರೆ ಸುಮನ್ ರಂಗನಾಥ್ ಮತ್ತು ಪ್ರೇಮ. 'ಬಿಂದಾಸ್' ಮೂಲಕ ಸುಮನ್ ರಂಗನಾಥ್ ಹಾಗೂ 'ಶಿಶಿರ'ದಿಂದ ಪ್ರೇಮಾ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿ ಆಗಿದೆ. ಇವರದೇ ಹಾದಿಯಲ್ಲಿ ಈಗ ಮತ್ತೊಬ್ಬರು ನಡೆಯುತ್ತಿದ್ದಾರೆ. ಅವರೇ ಚಂದ್ರಿಕಾ. ಯಾರೀ ಚಂದ್ರಿಕಾ?

ಬಹುಶಃ ಹಲವರಿಗೆ ಚಂದ್ರಿಕಾ ಮರೆತೇ ಹೋಗಿರಬಹುದು. ಚಂದ್ರಿಕಾ ಕನ್ನಡದವರಾದರೂ ಮೊದಲು ನಟಿಸಿದ್ದು ತಮಿಳಿನ ನಟ್ಟು ಚಿತ್ರದಲ್ಲಿ. ಅಲ್ಲಿಂದ ಅವರನ್ನು ಕನ್ನಡಕ್ಕೆ ಕರೆತಂದವರು ಜೈ ಜಗದೀಶ್ ಮತ್ತು ಶ್ರೀನಿವಾಸ ಮೂರ್ತಿ. ತಾಯಿಗೊಬ್ಬ ತರ್ಲೆ ಮಗ ಚಿತ್ರದ ಮೂಲಕ ಬಂದ ಚಂದ್ರಿಕಾ ಆಮೇಲೆ, ಗೋಲ್‌ಮಾಲ್ ರಾಧಾಕೃಷ್ಣ, ನರಸಿಂಹ, ರಣಭೇರಿ, ವಿಕ್ರಂ ಹೀಗೆ ಕನ್ನಡದಲ್ಲಿ ಸುಮಾರು 35 ಚಿತ್ರಗಳಲ್ಲಿ ನಟಿಸಿರುವ ಚಂದ್ರಿಕಾ ಅವರ ಕೊನೆಯ ಚಿತ್ರ ಜನಮೆಚ್ಚಿದ ಮಗಳು.

ಹತ್ತು ವರ್ಷಗಳ ಹಿಂದೆ ದಂತವೈದ್ಯರೊಬ್ಬರನ್ನು ಮದುವೆಯಾಗಿ ಆಸ್ಟ್ತ್ರೇಲಿಯಾಕ್ಕೆ ಹಾರಿದ ಚಂದ್ರಿಕಾ ಮತ್ತೆ ಗಾಂಧಿನಗರಕ್ಕೆ ಬಂದಿದ್ದಾರೆ. ಸದ್ಯಕ್ಕೆ, ಅವರು ಯಾವುದೇ ಚಿತ್ರದಲ್ಲೂ ನಟಿಸುತ್ತಿಲ್ಲ. ಕೇವಲ ಸಿನಿಮಾ ಒಂದೇ ಅಲ್ಲ ಉತ್ತಮ ಪಾತ್ರವಿರುವ ಧಾರಾವಾಹಿಗಳಾದರೂ ಆಯ್ತು ಅಂತಾರೆ.

ಅಂದು ಪುಟ್ಟಣ್ಣ ಕಣಗಾಲ್ ಅವರು ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ನೀಡುತ್ತೇನೆ ಅಂದಿದ್ದರಂತೆ. ದುರಾದೃಷ್ಟವಶಾತ್, ಅದು ಭರವಸೆಯಾಗಿಯೇ ಉಳಿಯಿತು ಎಂದು ಗತಕಾಲಕ್ಕೆ ಜಾರುತ್ತಾರೆ ಚಂದ್ರಿಕಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಂದ್ರಿಕಾ, ತಾಯಿಗೊಬ್ಬ ತರ್ಲೆ ಮಗ, ಜೈಜಗದೀಶ್, ಪುಟ್ಟಣ್ಣ ಕಣಗಾಲ್