ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಸೂರ್ಯಕಾಂತಿ'ಯ ಸಂಗೀತ ಅರಳುತ್ತಿದೆ (Suryakanthi | Chethan | Rejina | Chaithanya)
ಸುದ್ದಿ/ಗಾಸಿಪ್
Feedback Print Bookmark and Share
 
Suryakanthi
MOKSHA
ಅವಘ್ನ ಮೀಡಿಯಾ ವತಿಯಿಂದ ಎಂ. ವಾಸು ಅರ್ಪಿಸುವ ಬಿ.ಎನ್.ಸುಜಾತ ನಿರ್ಮಿಸುತ್ತಿರುವ 'ಸೂರ್ಯಕಾಂತಿ' ಚಿತ್ರಕ್ಕೆ ಆಕಾಶ್ ರೇಕಾರ್ಡಿಂಗ್ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ ನೀಡಲಾಗುತ್ತಿದೆ.

ಆ ದಿನಗಳು ನಂತರ ಚೈತನ್ಯ ನಿರ್ದೇಶಿಸುತ್ತಿರುವ ದ್ವಿತೀಯ ಚಿತ್ರ ಇದು. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಸೂರ್ಯಕಾಂತಿಗೂ ಸಂಗೀತ ಸಂಯೋಜಿಸಿದ್ದು, ಸದ್ಯದಲ್ಲೆ ಚಿತ್ರದ ಧ್ವನಿ ಸುರುಳಿ ಬಿಡುಗಡೆಯಾಗಲಿದೆ.

ಚಿತ್ರದ ನಾಯಕನಾಗಿ ಚೇತನ್ ಹಾಗೂ ನಾಯಕಿಯಾಗಿ ರಜಿನಾ ನಟಿಸಿದ್ದಾರೆ. ಇತರ ಮುಖ್ಯ ಪಾತ್ರಗಳಲ್ಲಿ ತಮಿಳಿನ ನಾಸರ್, ಕನ್ನಡದ ರಾಮಕೃಷ್ಣ, ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಪಳಗಿದ ಗಣೇಶ್ ಯಾದವ್ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಕಲ್ಯಾಣ್ ಮತ್ತಿತರರು ರಚಿಸಿರುವ ಗೀತೆಗಳನ್ನು ಶ್ರೇಯಾ ಘೋಷಾಲ್, ಕುನಾಲ್ ಗಾಂಜಾವಾಲಾ, ಕಾರ್ತಿಕ್ ಹಾಗೂ ಇತರ ಖ್ಯಾತ ಗಾಯಕರು ಹಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೂರ್ಯಕಾಂತಿ, ಕೆ ಎಂ ಚೈತನ್ಯ, ಚೇತನ್, ರೆಜಿನಾ