ಜೈ ಜಗದೀಶ್ ಮತ್ತು ಸುಹಾಸಿನಿ ಜೋಡಿ ಎಂದರೆ ಕನ್ನಡಿಗರಿಗೆ ನೆನಪಾಗುವುದು 'ಬಂಧನ'. ವಿಷ್ಣುವರ್ಧನ್ ನಾಯಕನಟನಾಗಿ ಅಭಿನಯಿಸಿದ ಈ ಚಿತ್ರದಲ್ಲಿ ಜೈ ಮತ್ತು ಸುಹಾಸಿನಿ ಪತಿ ಪತ್ನಿಯಾಗಿ ನಟಿಸಿದ್ದರು. ಇವರಿಬ್ಬರ ಕಾಂಬಿನೇಷನ್ನಿನ ಈ ಬಂಧನಾ... ಹಾಡಂತೂ ಇಂದಿಗೂ ಜನರ ಬಾಯಲ್ಲಿ ನಲಿದಾಡುತ್ತಿರುವ ಹಿಟ್ ಹಾಡು.
ಎಷ್ಟೋ ವರ್ಷಗಳ ನಂತರ ಇದೀಗ ಜೈ ಜಗದೀಶ್ ಮತ್ತು ಸುಹಾಸಿನಿ ಒಂದಾಗಿ ಅದರಲ್ಲೂ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಯಶಸ್ಸು ಕಂಡವರು ನಿರ್ದೇಶಕ ನಾಗಶೇಖರ್. ಅವರ ನಿರ್ದೇಶನದಲ್ಲಿ ಕಿಟ್ಟಿ, ರಮ್ಯ ಅಭಿನಯಿಸುತ್ತಿರುವ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಜೈ ಮತ್ತು ಸುಹಾಸಿನಿ ಪತಿ- ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಳೆದ ವರ್ಷ ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದಲ್ಲಿ ಸುಹಾಸಿನಿಯವರು ವಿಷ್ಣುವರ್ಧನ್‌ಗೆ ಜೋಡಿಯಾಗಿದ್ದರು. ಈ ವರ್ಷ ಅನಂತ್ ನಾಗ್ ಅವರಿಗೆ ಎರಡನೇ ಮದುವೆಯಲ್ಲಿ ಜೊತೆಯಾಗಿದ್ದರು. ಇದೀಗ ಜೈ ಜಗದೀಶ್ ಸರದಿ.