ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಂತಸದ ಸುದ್ದಿಯಿದೆ. ಶಿವಣ್ಣರನ್ನು ರೌಡಿಸಂ ಹಾಗೂ ಅಣ್ಣತಂಗಿ ಸೆಂಟಿಮೆಂಟಿನ ಚಿತ್ರಗಳಲ್ಲಿ ನೋಡಿ ನೋಡಿ ಬೇಜಾರು ಬಂದಿದ್ದರೆ, ಈಗ ಮತ್ತೆ ಶಿವಣ್ಣ ತನ್ನ ಹಳೆಯ ಮಾದರಿಯ ಲವರ್ ಬಾಯ್ ಇಮೇಜಿನಲ್ಲಿ ಮತ್ತೆ ನಟಿಸಲಿದ್ದಾರೆ. ಶಿವಣ್ಣನಿಗೆ ಹೀಗೊಂದು ಬದಲಾವಣೆಗೆ ಕಾರಣರಾದವರು ನಿರ್ದೇಶಕ ಅನಂತರಾಜು.
ಇದೇ ಅನಂತರಾಜು ಈ ಹಿಂದೆ ಹ್ಯಾಟ್ರಿಕ್ ಹೀರೊ ಅಭಿನಯದಲ್ಲಿ ನಂದ ಚಿತ್ರ ನಿರ್ದೇಶಿಸಿದ್ದರು. ಆ ಚಿತ್ರ ಮಚ್ಚು ಲಾಂಗುಗಳ ಹಿನ್ನಲೆಯದಾಗಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ಕೊಠಾರಿ ಎಂಟರ್ ಪ್ರೈಸಸ್‌ನ ಚೆನ್ನಪಟ್ಟಣ ರಾಜೇಂದ್ರ ನಿರ್ಮಿಸಲಿರುವ ಈ ಚಿತ್ರಕ್ಕೆ ಸೂಕ್ತ ಶೀರ್ಷಿಕೆಯ ಹುಡುಕಾಟ ನಡೆದಿದೆ. ಹಾಗೆಯೇ ನಾಯಕಿಯ ಶೋಧ ಕಾರ್ಯವು ಮುಂದುವರೆದಿದೆ. 2010ರ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭ. ಸವಾರಿ ಖ್ಯಾತಿಯ ಮಣಿಕಾಂತ್ ಕದ್ರಿ ಅವರ ಸಂಗೀತವಿದ್ದು ಎಚ್.ಸಿ.ವೇಣು ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದಾರೆ.