ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಿನಿಮಾದಿಂದ ಮಿಮಿಕ್ರಿ ದಯಾನಂದ ವಿರಾಮ (Mimikri Dayanand | Kannada Film | Rajyotsava)
ಸುದ್ದಿ/ಗಾಸಿಪ್
Feedback Print Bookmark and Share
 
ಮಿಮಿಕ್ರಿ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಛಾಪು ಮೂಡಿಸಿದ ಮಿಮಿಕ್ರಿ ದಯಾನಂದ್ ಸದ್ಯಕ್ಕೆ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ಕಾಮಿಡಿ ಪೋಲಿಸ್ ಪಾತ್ರಗಳಲ್ಲಿ ಮಿಂಚಿದ್ದ ದಯಾನಂದ್ ಬಗ್ಗೆ ಗಾಂಧಿನಗರ ಮಂದಿಗೆ ಎಲ್ಲಿಲ್ಲದ ಅಕ್ಕರೆ.

ಟಿವಿ ವಾಹಿನಿಯಲ್ಲಿ ಮಿಮಿಕ್ರಿ ಕಾರ್ಯಕ್ರಮದಿಂದ ಪರಿಚಿತರಾಗಿದ್ದ ದಯಾನಂದ ಇದರ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿರು. ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಎಲ್ಲರನ್ನು ನಕ್ಕು ನಗಿಸಿದ್ದಾರೆ ದಯಾನಂದ. ಆದರೆ ಇತ್ತೀಚಿಗೆ ವಿದೇಶ ಸಂಚಾರದಲ್ಲೇ ಹೆಚ್ಚಿನ ದಿನಗಳನ್ನು ಕಳೆಯುತ್ತಿರುವ ದಯಾನಂದ್, ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಅವರು ಸಖತ್ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಖಾಸಗಿ ಟಿವಿ ವಾಹಿನಿಯಲ್ಲಿ ಕಾರ್ಯಕ್ರಮಗಳ ಉಸ್ತುವಾರಿಯು ಅವರ ಮೇಲಿರುವುದರಿಂದ ಚಿತ್ರರಂಗದಿಂದ ಮಾರು ದೂರ ಸರಿದಿದ್ದಾರೆ.

ಅಷ್ಟೇ ಅಲ್ಲ, ಈ ಭಾರಿ ಅವರು ದಕ್ಷಿಣ ಆಫ್ರಿಕಾದಲ್ಲಿ ರಾಜ್ಯೋತ್ಸವ ಆಚರಿಸಿ ಬಂದಿದ್ದಾರೆ. ಅಂದ ಮೇಲೆ ಅಲ್ಲಿವರೆಗೂ ಇವರ ಮಿಮಿಕ್ರಿ ತಲುಪಿದೆ ಎಂದರೆ ತಪ್ಪಲ್ಲ. ಇವರನ್ನು ಆಹ್ವಾನಿಸಿರುವುದು ಅಲ್ಲಿನ ಕನ್ನಡ ಬಳಗ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಿಮಿಕ್ರಿ ದಯಾನಂದ್, ಕನ್ನಡ ಸಿನಿಮಾ, ರಾಜ್ಯೋತ್ಸವ