ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಐತಲಕ್ಕಡಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ (Aithalakadi | Bullet Prakash | Ravichandran)
ಸುದ್ದಿ/ಗಾಸಿಪ್
Feedback Print Bookmark and Share
 
Ravichandran
MOKSHA
ನೂರಾರು ಕಲಾವಿದರನ್ನು ಒಳಗೊಂಡಿರುವ ಐತಲಕ್ಕಡಿ ಚಿತ್ರಕ್ಕೆ ಇದೀಗ ಮತ್ತೊಬ್ಬ ಸ್ಟಾರ್ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಬೇರಾರು ಅಲ್ಲ. ಕ್ರೇಜಿ ಸ್ಟಾರ್ ರವಿಚಂದ್ರನ್.

ಇತ್ತೀಚೆಗೆ ರವಿಚಂದ್ರನ್ ಈ ಚಿತ್ರದ ಒಂದು ಹಾಡಿನಲ್ಲಿ ಚಿತ್ರದ ನಾಯಕಿ ನೀತೂ ಜೊತೆ ಪ್ರತ್ಯಕ್ಷವಾಗಿದ್ದಾರೆ. ಅದು ನಾಯಕಿ ನಟಿಯ ಕನಸಿನ ಹಾಡು. ರವಿಚಂದ್ರನ್ ಫ್ಯಾನ್ ಆಗಿರುವ ನೀತೂ ಕನಸಿನಲ್ಲಿ ಕನಸುಗಾರನ ಜೊತೆ ಹಾಡಿ ಕುಣಿಯುವ ಈ ದೃಶ್ಯಗಳನ್ನು ಇತ್ತೀಚೆಗೆ ನಗರದ ಹೊರವಲಯದಲ್ಲಿ ಎರಡು ದಿನಗಳ ಕಾಲ ಚಿತ್ರೀಕರಿಸಲಾಗಿದೆ.

ಸದ್ಯಕ್ಕೆ ತುಸು ಮೈ ತೂಕ ಇಳಿಸಿಕೊಂಡಿರುವ ರವಿಚಂದ್ರನ್ ಈ ಹಾಡಿನಲ್ಲಿ ಅಭಿಮಾನಿಗಳನ್ನು ರಂಜಿಸುವುದಂತೂ ಖಂಡಿತ ಎಂಬುದು ಚಿತ್ರತಂಡದ ಅಭಿಮತ. ಬುಲೆಟ್ ಪ್ರಕಾಶ್, ರಂಗಾಯಣ ರಘು ಪ್ರಧಾನ ಭೂಮಿಕೆಯಲ್ಲಿದ್ದು, ಚಿತ್ರಕ್ಕೆ ಜೆ.ಜಿ. ಕೃಷ್ಣ ನಿರ್ದೇಶನವಿದೆ. ಚಿತ್ರೀಕರಣ ಬಹುತೇಕ ಅಂತಿಮಗೊಂಡಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐತಲಕ್ಕಡಿ, ರವಿಚಂದ್ರನ್ ಬುಲೆಟ್ ಪ್ರಕಾಶ್, ರಂಗಾಯಣ ರಘು