ಕನ್ನಡ ಚಿತ್ರಗಳು ಬಿಡುಗಡೆಯಾಗಿ ಮೂರೇ ದಿನದಲ್ಲಿ ಚಿತ್ರಮಂದಿರದಿಂದ ಎತ್ತಂಗಡಿಯಾಗುತ್ತಿರುವುದು ತೀರಾ ಸಾಮಾನ್ಯ ಎನ್ನುವಾಗಲೇ ಇದೀಗ ಚಿತ್ರವೊಂದು ಬಿಡುಗಡೆಯಾಗುವುದಕ್ಕಿಂತಲೂ ಮುಂಚೆಯೇ ಚಿತ್ರವೊಂದು ತಮಿಳು ಚಿತ್ರರಂಗದಲ್ಲಿ ಸುದ್ದಿ ಮಾಡುತ್ತಿದೆ. ಸೈನೈಡ್ ಖ್ಯಾತಿಯ ನಿರ್ದೇಶಕ ಎ.ಎಂ.ಆರ್.ರಮೇಶ್ ಅವರ ಪ್ರಯತ್ನಕ್ಕೆ ಸಂದ ಫಲವಿದು.
MOKSHA
ಇವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪೊಲೀಸ್ ಕ್ವಾಟ್ರಸ್ ಚಿತ್ರ ತಮಿಳು ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿಸಿದೆ ಎನ್ನುವುದು ಹೆಮ್ಮೆಯ ವಿಷಯವೇ ಸರಿ. ನೈಜ ಘಟನೆಯನ್ನಾಧರಿಸಿದ ಸೈನೈಡ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಛಾಪು ಮೂಡಿಸಿದ ರಮೇಶ್ ಇದೀಗ ಮತ್ತೊಮ್ಮೆ ನೈಜ ಘಟನೆ ಆಧಾರದ ಮೇಲೆ ಚಿತ್ರ ನಿರ್ದೇಶಿಸುತ್ತಿದ್ದಾರೆ.
ಇದು ರಮೇಶ್ ಅವರ ಕನಸಿನ ಚಿತ್ರ. ಚಿತ್ರ ಮಾಡುವುದಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಚಿತ್ರ ನಿರ್ದೇಶನಕ್ಕಿಳಿದಿದ್ದಾರೆ. ಅದಕ್ಕಾಗಿ ತಾನು ಹಲವು ಪೊಲೀಸರ ಹಿಂದೆ ಬಿದ್ದು ಅವರಿಗೆ ಕಾಷ್ಟು ಕಾಟ ಕೊಟ್ಟಿದ್ದೇನೆ ಎನ್ನುತ್ತಾರೆ ಅವರು. ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಜೇಮ್ಸ್ ವಸಂತನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದು ನಾಯಕ ಅನೀಶ್‌ಗೆ ಪ್ರಥಮ ಪರೀಕ್ಷೆ. ನಾಯಕಿಯಾಗಿ ಇಂತಿ ನಿನ್ನ ಪ್ರೀತಿಯ ಚಿತ್ರದ ಖ್ಯಾತಿಯ ಸೋನು ಇದ್ದಾರೆ. ಅಂದಹಾಗೆ, ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ.