ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಸೆಲ್ಯೂಟ್‌'ನ ಅಶ್ವಿನಿ ಈಗ ಐಟಂ ಗರ್ಲ್! (Ashwini | Item Dance | Selute)
ಸುದ್ದಿ/ಗಾಸಿಪ್
Feedback Print Bookmark and Share
 
Ashwini
MOKSHA
ಸಿನಿಮಾ ರಂಗದಲ್ಲಿ ಮಿಂಚಬೇಕು ಎಂದು ಬಂದ ಹಲವರಿಗೆ ನಿರಾಸೆಯಾದಾಗ ಕೊನೆಗೆ ಉಳಿಯುವುದು ಐಟಂ ಹಾಡುಗಳು. ಹೀಗೆ ಐಟಂ ಹಾಡಿಗೆ ಇದೀಗ ಹೆಜ್ಜೆ ಹಾಕುತ್ತಿರುವವರು ನಾಯಕಿಯಾಗಿ ನಟಿಸಿದ್ದ ಅಶ್ವಿನಿ.

ಅಶ್ವಿನಿ ಯಾರು ಗೊತ್ತಲ್ಲ? ಅದೇ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಐಡಿಯಾ ಸ್ಟಾರ್ ಸಿಂಗರ್ ಕಾರ್ಯಕ್ರಮ ನಡೆಸಿಕೊಡುತ್ತಾರಲ್ಲ, ಅದೇ ಅಶ್ವಿನಿ. ಈ ಅಶ್ವಿನಿಗೆ ಮದುವೆಯೂ ಆಗಿದೆ. ಗಂಡ ಉದ್ಯಮಿ. ಗಂಡನ ಸಹಮತದಿಂದಲೇ ಇವರು ಮದುವೆಯಾದ ಮೇಲೆ ಚಿತ್ರರಂಗಕ್ಕೆ ಬಂದುದಂತೆ. ಅಷ್ಟೇ ಅಲ್ಲ, ಈಕೆಗೆ ಒಬ್ಬ ಮಗನೂ ಇದ್ದಾನೆ. ಆ ಪುಟ್ಟ ಹುಡುಗ ಶೂಟಿಂಗ್ ಸೆಟ್ಟಿಗೂ ಅಮ್ಮನ ಹಿಂದೆ ಬರುತ್ತಾನೆ! ಈಗ ಇಂತಿಪ್ಪ ಅಶ್ವಿನಿ ಐಟಂ ಹಾಡಿಗೆ ನರ್ತಿಸಲು ಹೊರಟಿದ್ದಾರೆ.

ಹೌದು. ವಾರಸ್ದಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ನಟಿ ಅಶ್ವಿನಿ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಹೀಗೆ ತೂಗುಯ್ಯಾಲೆಯಲ್ಲಿದ್ದ ನಟಿ ಈಗ ಚಿಂದೋಡಿ ಬಂಗಾರೇಶ್ ನಿರ್ದೇಶನದ ಶಂಭೋ ಶಂಕರ ಚಿತ್ರದಲ್ಲಿನ ಐಟಂ ಹಾಡಿಗೆ ಗೆಜ್ಜೆ ಕಟ್ಟಿದ್ದಾರಂತೆ.

ಇತ್ತೀಚೆಗೆ ನಟ ಬಿ.ಸಿ. ಪಾಟೇಲ್ ನಿರ್ದೇಶನ ಮತ್ತು ನಾಯಕನಾಗಿ ನಟಿಸಿದ್ದ ಸೆಲ್ಯೂಟ್ ಚಿತ್ರದಲ್ಲಿ ಗ್ಲಾಮರ್ ಗೊಂಬೆಯಾಗಿ ಕಾಣಿಸಿದ್ದ ಅಶ್ವಿನಿಗೆ ಪ್ರೇಕ್ಷಕರಾರೂ ಸೆಲ್ಯೂಟ್ ಹೊಡೆಯಲಿಲ್ಲ. ಇದೀಗ ಐಟಂನತ್ತ ದೃಷ್ಟಿ ಹಾಯಿಸಿದ್ದಾರೆ. ಇದರಲ್ಲಾದರೂ ಮಿಂಚುತ್ತಾರಾ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಶ್ವಿನಿ, ಐಟಂ ಹಾಡು, ಸೆಲ್ಯೂಟ್, ವಾರಸ್ದಾರ