ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗುಬ್ಬಿಯ ಜೊತೆ ಮೀನಕಂಗಳ ಗುಬ್ಬಚ್ಚಿ ರೀಮಾ (Reema | Gubbi | Anaji Nagaraj)
ಸುದ್ದಿ/ಗಾಸಿಪ್
Feedback Print Bookmark and Share
 
ಗುಬ್ಬಿ ಚಿತ್ರದ ಚಿತ್ರೀಕರಣ ವೇಗವಾಗಿ ಸಾಗುತ್ತಿದೆ. ಅಣಜಿ ನಾಗರಾಜ್ ನಿರ್ಮಾಣದಲ್ಲಿ, ವಿಜಯ್ ನಿರ್ದೇಶನವಿರುವ ಈ ಚಿತ್ರದಲ್ಲಿ ಮಾಡೆಲ್ ಲೋಕದ ಬೆಡಗಿ ರೀಮಾ ವೊರಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ಅಣಜಿ ಈ ಹಿಂದೆ ನಿರ್ಮಿಸಿದ ಗಿಲ್ಲಿ ಚಿತ್ರಕ್ಕೂ ಕೂಡ ರಾಕುಲ್ ಪ್ರೀತ್ ಸಿಂಗ್ ಎಂಬ ರೂಪದರ್ಶಿಯನ್ನು ಕರೆಸಿ ಕುಣಿಸಿದ್ದರು. ಅಂತೂ ಅಣಜಿ, ಮಾಡಲಿಂಗ್ ಪ್ರಪಂಚದ ಸುಂದರಿಯರನ್ನು ಕನ್ನಡ ಜನತೆಗೆ ಪರಿಚಯಿಸಲು ಆರಂಭಿಸಿದ್ದಾರೆ. ನಿಮಗೆ ಗೊತ್ತಿರಲಿಕ್ಕಿಲ್ಲ, ಗುಬ್ಬಿ ಚಿತ್ರದಲ್ಲಿ ಹೊಸ ಮುಖಗಳದ್ದೇ ಕಾರುಬಾರು. ಇವರೆಲ್ಲರ ಹೆಸರಿನ ಮೊದಲ ಆಂಗ್ಲ ಅಕ್ಷರಗಳನ್ನು ಸೇರಿಸಿ ಇದಕ್ಕೆ ಶೀರ್ಷಿಕೆ ಇಡಲಾಗಿದೆಯಂತೆ.

ರೂಪದರ್ಶಿ ರೀಮಾ, ಕೋಕಾ ಕೋಲಾ ಜಾಹಿರಾತಿನಲ್ಲಿ ನಟ ಅಮೀರ್ ಖಾನ್ ಜೊತೆಗೆ ಹಾಗೂ ಎಲ್‌ಜಿ ಫೋನಿನ ಜಾಹೀರಾತಿಗೆ ಇಮ್ರಾನ್ ಹಶ್ಮಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಮಾಡೆಲಿಂಗ್ ಅಲ್ಲದೇ ಹಿಂದಿ ಸಿನೆಮಾಗಳಲ್ಲೂ ಅಭಿನಯಿಸಿದ ಅನುಭವವೂ ರೀಮಾಗಿದೆ. ರಂಗ್ ರಸಿಯಾ, ನೈನಾ, ಚೂ ಲೇ ಆಸ್ಮಾನ್ ಮುಂತಾದ ಹಿಂದಿ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅಂದ ಹಾಗೆ ಗುಬ್ಬಿ ಚಿತ್ರದಲ್ಲಿ ರೀಮಾಗೆ ಕಾಲೇಜು ಹುಡುಗಿಯ ಪಾತ್ರವಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೀಮಾ, ಗುಬ್ಬಿ, ಅಣಜಿ ನಾಗರಾಜ್