ಧರ್ಮನ ಟೈಂ ಟೋಟಲಿ ಚೇಂಜ್
ನವಗ್ರಹ ಚಿತ್ರದ ಒಂಭತ್ತು ಮಂದಿಯಲ್ಲಿ ನಾಯಕನಾಗಿದ್ದ ಓರ್ವ ಧರ್ಮ ಕೀರ್ತಿ ರಾಜ್. ಆತನ ಟೈಂ ಇದೀಗ ಸಂಪೂರ್ಣ ಬದಲಾದಂತಿದೆ. ಒಲವೇ ವಿಸ್ಮಯ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವಾಗಲೇ ಅವರನ್ನು ಇನ್ನೊಂದು ಆಫರ್ ಹುಡುಕಿಕೊಂಡು ಬಂದಿದೆ. ನಟ ಪ್ರೇಮ್ ನಾಯಕನಾಗಿದ್ದ ಗುಣವಂತ ಚಿತ್ರದ ನಿರ್ದೇಶಕ ರಘುವರ್ಧನ್, ತಮ್ಮ ಚಿತ್ರದಲ್ಲಿ ನಾಯಕನಾಗಿ ನಟಿಸುವಂತೆ ಧರ್ಮರಿಗೆ ಆಮಂತ್ರಣ ನೀಡಿದ್ದಾರೆ.ಅಂದಹಾಗೆ ಹಾಗೆ ಆಮಂತ್ರಣ ಬಂದ ಚಿತ್ರದ ಹೆಸರೂ ಕೂಡಾ ಆಮಂತ್ರಣ ಅಂತ. ಜನವರಿಯಿಂದ ಈ ಚಿತ್ರ ಆರಂಭವಾಗಲಿದೆಯಂತೆ . ಚಿತ್ರಕ್ಕೆ ನಾಯಕಿಯ ಹುಡುಕಾಟ ಸಾಗಿದೆ.