ನಟ ನಿರ್ದೆಶಕ ಪ್ರೇಮ್‌ಗೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಸೋಲು ಬೆನ್ನು ಹತ್ತಿರಬಹುದು, ಆದರೂ ವಿಚಿತ್ರವೆಂದರೆ, ಕೆಲವು ನಿರ್ಮಾಪಕರು ನಾಯಕನಾಗಿ ತಮ್ಮ ಚಿತ್ರದಲ್ಲಿ ನಟಿಸುವಂತೆ ದುಂಬಾಲು ಬಿದ್ದಿದ್ದಾರಂತೆ. ಆದರೆ, ಕಿಲಾಡಿ ಪ್ರೇಮ್ ಮಾತ್ರ ಯಾರಿಗೂ ಸಿಗದೆ ಹಾರಿಕೊಳ್ಳುತ್ತಿದ್ದಾರಂತೆ .
ಪ್ರೀತಿ ಏಕೆ ಭೂಮಿ ಮೇಲಿದೆ? ಚಿತ್ರದಲ್ಲಿನ ಪ್ರೇಮ್ ನಟನೆ ಕಂಡು ಮನಸೋತ ನಿರ್ಮಾಪಕ ಪುಣ್ಯಾತ್ಮರುಗಳು ಯಾರು ಎಂಬುದನ್ನು ಮಾತ್ರ ಕೇಳಬೇಡಿ. ಅದು ನಿಗೂಢ.
MOKSHA
ಮೂಲಗಳ ಪ್ರಕಾರ, ಪ್ರೇಮ್ ನಿರ್ದೇಶಕ ಹಾಗೂ ನಿರ್ಮಾಪಕರಾದಂತಹ ಎಸ್. ನಾರಾಯಣ್‌ಗೆ ಕಾಲ್ ಶೀಟ್ ಗುಟ್ಟಾಗಿ ಕೊಟ್ಟಿದ್ದಾರಂತೆ. ನಾರಾಯಣರ ಕಥೆ ಕೇಳಿ ಮನಸೋತ ಪ್ರೇಮ್ ಅವರ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ.
ಮಗನನ್ನು ನಂಬಿದರೆ ಅಷ್ಟೇ ಕಥೆ ಅನ್ನೋದು ನಾಣಿಗೆ ತಡವಾಗಿ ಫ್ಲ್ಯಾಶ್ ಆಗಿದೆಯೋ ಗೊತ್ತಿಲ್ಲ, ಒಟ್ಟಾರೆ, ಪಂಕಜ್ ಕೈಬಿಟ್ಟು ಸುದೀಪ್ ಕೈಹಿಡಿದದ್ದಾಗಿದೆ. ಈಗ ಪ್ರೇಮ್ ಕೈಹಿಡಿದಿರುವ ಬಗ್ಗೆಯೂ ಮಾತು ಕೇಳಿ ಬರುತ್ತಿದೆ. ಏನೋಪ್ಪಾ, ಎಲ್ಲದಕ್ಕೂ ಕಾಲವೇ ಉತತ್ರ ಹೇಳುತ್ತ ಅಂತಾ ಕಾಯೋದೇ ಬೆಸ್ಟ್ ಅಂತೀರಾ?