ಬಿ.ವೆಂಕಟೇಶ್ ಬಾಬು ಹಾಗೂ ಎಂ.ಗೋವಿಂದರಾಜು ನಿರ್ಮಿಸಿ, ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿರುವ ಎ.ಕೆ.56 ಚಿತ್ರದ ತಂಡ ಚಿತ್ರೀಕರಣಕ್ಕೆಂದು ಕುಂದಾಪುರಕ್ಕೆ ತೆರಳಿದೆ. ಇದು ಓಂ ಪ್ರಕಾಶ್ ಅವರ ನಿರ್ದೇಶನದ 25ನೇ ಚಿತ್ರ.
ಕುಂದಾಪುರದ ಹಲಸನಾಡು, ಮುರುಡೇಶ್ವರ ಸುತ್ತ ಮುತ್ತ ಬೀಡು ಬಿಟ್ಟು ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರಕ್ಕೆ ಅಭಿಮಾನ್ ಸಂಗೀತ ನೀಡಿದ್ದು, ಎಸ್.ಮನೋಹರ್ ಛಾಯಾಗ್ರಹಣ ಮಾಡಿದ್ದಾರೆ.
ಸಿದ್ದಾಂತ್, ಶಿರಿನ್, ಶರತ್ ಬಾಬು, ಸುಮಲತಾ, ಅವಿನಾಶ್, ಬುಲೆಟ್ ಪ್ರಕಾಶ್, ಅತುಲ್ ಕುಲಕರ್ಣಿ, ಲೋಕನಾಥ್, ಕಿಶೋರಿ ಬಲ್ಲಾಳ್ ಅನಂತವೇಲು, ಸತ್ಯಜಿತ್, ರಮೇಶ್ ಪಂಡಿತ್, ಸಂಗೀತ, ಸುಚಿತ್ರಾ, ಕೋಟೆ ಪ್ರಭಾಕರ್, ಶಂಕರ್ ನಾರಾಯಣ್ ಮುಂತಾದವರು ಎ.ಕೆ.56ನ ಮುಖ್ಯ ತಾರಾಗಣದಲ್ಲಿದ್ದಾರೆ.