ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿದೇಶದಲ್ಲಿ ದಿಗಂತ್‌ನ ಪರ್ಸನಲ್ ಕೆಲಸ ಎಂಥದ್ದು?! (Digant | Swayamvara | Sharmila Mandre | Bankok)
ಸುದ್ದಿ/ಗಾಸಿಪ್
Bookmark and Share Feedback Print
 
Swayamvara
MOKSHA
ಡಿಂಪಲ್ ಕೆನ್ನೆಯ ಸುಂದರ ದಿಗಂತ್ ಈ ಹಿಂದೆ ಅಮೇರಿಕಾದಲ್ಲಿ ಶೂಟಿಂಗ್‌ಗೆಂದು ತೆರಳಿದ್ದಾಗ ಅಲ್ಲಿ ರಾತ್ರಿ ವೇಳೆ ಇಬ್ಬರು ನಟಿಯರ ನಡುವಿನ ಮುದ್ದಿನ ಹೀರೊ ಆಗಿ ಸಿಕ್ಕಿಕೊಂಡ ವಿಷಯ ಸೀದಾ ಗಾಂಧಿನಗರಕ್ಕೆ ಅಮೇರಿಕಾದಿಂದ ಇ ಮೇಲ್ ಅಗಿತ್ತೆಂದು ಗುಲ್ಲೆಬ್ಬಿತ್ತು. ಅದು ಹಳಸಲು ಸುದ್ದಿ ಬಿಡಿ, ಈಗಿನ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದರೆ, ಸ್ವಯಂವರ ಚಿತ್ರದ ಚಿತ್ರೀಕರಣಕ್ಕೆಂದು ಬ್ಯಾಂಕಾಕಿನ ಖ್ಯಾತ ಬಾಡಿ ಮಸಾಜ್ ಸಿಟಿ ಪಟಾಯಾಗೆ ಚಿತ್ರತಂಡ ತೆರಳಿತ್ತು. ಇನ್ನೇನು ಶೂಟಿಂಗ್ ಮುಗಿಸಲು ಎರಡು ದಿನ ಬಾಕಿ ಇದೆ ಎನ್ನುವಷ್ಟರಲ್ಲಿ ದಿಗಂತ ಮಾಯ!

ಅಂದು ಆತನಿಗಾಗಿ ನಿರ್ದೇಶಕರಿಂದ ಹಿಡಿದು ಸಹನಟರೂ ಸೇರಿದಂತೆ ಇಡೀ ಯುನಿಟ್ ಮಂದಿ ಹುಡುಕಾಡದ ಮಸಾಜ್ ಪಾರ್ಲರ್ ಸಂಧಿಗಳೇ ಇರಲಿಲ್ಲ. ದಿಗಂತನ ಮೊಬೈಲಿಗೆ ಎಷ್ಟೇ ಕರೆ ಮಾಡಿದರೂ ನೆಟವರ್ಕ್ ಪ್ರಾಬ್ಲಂ. ಮಾರನೇ ದಿನ ಬೆಂಗಳೂರಿಗೆ ಮರಳಬೇಕೆಂದು ಚಿತ್ರತಂಡ ಯೋಚಿಸುತ್ತಿದ್ದಾಗಲೂ ದಿಗಂತ್ ಪತ್ತೆಯಿಲ್ಲ.

ದಿಗಂತ್ ಎಂಬ ಈ ಆಸಾಮಿ ಮಾತ್ರ ಚಿತ್ರತಂಡ ಇದೆಯೋ, ಹೋಗಿದೆಯೋ ಅಂತ ನೋಡೋದಕ್ಕೂ ಬರಲಿಲ್ಲವಂತೆ. ಇನ್ನು ಇವನನ್ನು ಕಾದರೆ ಪ್ರಯೋಜನವಿಲ್ಲ ಅಂದುಕೊಂಡು ಉಳಿದವರು ಮರಳಲು ರೆಡಿಯಾದರು.

ಅಂತಿಮವಾಗಿ ನಟಿ ಶರ್ಮಿಳಾ ಮಾಂಡ್ರೆ ದಿಗಂತ್‌ನ ನಂಬರಿಗೆ ಡಯಲ್ ಮಾಡಿದರು. ಅದೃಷ್ಟವೆಂಬಂತೆ ಕೊನೆಗೂ ಆತನ ಫೋನ್ ರಿಂಗಿಣಿಸಿತ್ತು. ಸಿಕ್ಕಸಿಕ್ಕವರು ಫೋನ್ ಕಸಿದುಕೊಂಡು ದಿಗಂತನಿಗೆ ಮನಬಂದಂತೆ ಮಂಗಳಾರತಿ ಮಾಡಿ ಮಾತು ಮುಗಿಸಿದ್ದೂ ಆಯಿತು. ಅಂತೂ ದಿಗಂತ್ ವಿಮಾನ ಟೇಕಾಫ್ ಆಗುವುದರೊಳಗೆ ತಂಡವನ್ನು ಸೇರಿಕೊಂಡುಬಿಟ್ಟನಂತೆ. ಎರಡು ದಿನ ಎಲ್ಲಿಗೆ ಹೋಗಿದ್ದೀರಿ ಸಾಹೇಬ್ರೇ? ಎಂಬ ಪ್ರಶ್ನೆಗೆ ದಿಗಂತ ಕೊಟ್ಟ ಉತ್ತರ ಸ್ವಲ್ಪ ಪರ್ಸನಲ್ ಕೆಲಸ ಇತ್ತು ಅಂತ. ಎರಡು ದಿನ ನಾಪತ್ತೆಯಾಗುವಷ್ಟು ಪರ್ಸನಲ್ ಕೆಲಸ ಎನಿತ್ತಪ್ಪಾ ಅನ್ನೋದು ಯಾರಿಗೂ ಗೊತ್ತಾಗದ ಸತ್ಯ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದಿಗಂತ್, ಸ್ವಯಂವರ, ಶರ್ಮಿಳಾ ಮಾಂಡ್ರೆ, ಬ್ಯಾಂಕಾಕ್