ವಿ.ಮನೋಹರ್ ಶಾಸ್ತ್ರೀಯ ಸಂಗೀತದ ಹೊಸ ರಾಗವೊಂದನ್ನು ಆವಿಷ್ಕರಿಸಿದ್ದಾರೆ. ಆ ರಾಗವನ್ನು `ಮನೋಹರ ರಾಗವೆಂದು ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ್ ನಮಕರಣವನ್ನೂ ಮಾಡಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಕುರಿತು `ರಸ ಋಷಿ ಕುವೆಂಪು ಎಂಬ ಚಿತ್ರ ಮಾಡುತ್ತಿರುವ ಸುದ್ದಿ ನಿಮಗೆಲ್ಲಾ ತಿಳಿದೇ ಇದೆ. ಈ ಚಿತ್ರದ ಸಂಗೀತ ನಿರ್ದೇಶಕರು ವಿ. ಮನೋಹರ್. ರಾಷ್ಟ್ರಕವಿಯ ಹಲವು ಗೀತೆಗಳು ಈ ಚಿತ್ರದಲ್ಲಿ ಬಳಕೆಯಾಗುತ್ತಿವೆ. ಅದರಲ್ಲಿ ಓ ನನ್ನ ಚೇತನಾ ಎಂಬ ಗೀತೆಯೂ ಸೇರಿದೆ. ಈ ಹಾಡಿಗೆ ಕಂಪೋಸ್ ಮಾಡಿದ ಟ್ಯೂನನ್ನೇ ಇದೀಗ ಮನೋಹರ ರಾಗ ಎಂದು ಬಣ್ಣಿಸುತ್ತಿರುವುದು. ಈ ಟ್ಯೂನ್ ಮನೋಹರ್ ಅವರ ಅಗೋಚರ ಕಲ್ಪನಾಶಕ್ತಿಯಿಂದ ಸೃಷ್ಟಿಯಾಗಿದ್ದಂತೆ.
ಸೃಷ್ಟಿಸಿದ ಟ್ಯೂನ್ ರೇವತಿ ರಾಗ ಎಂಬುದು ಮನೋಹರ್ ವಾದ ಆದರೆ ಸಂಗೀತದ ಪುಸ್ತಕಗಳಲ್ಲಿ ಹುಡುಕಿ ಅದು ರೇವತಿ ರಾಗವಲ್ಲ ಎಂದು ಸ್ಪಷ್ಟಪಡಿಸಿದ ಸಂಗೀತ ವಿದ್ವಾನ್ ಆರ್.ಕೆ ಪದ್ಮನಾಭ್, ಆ ಹೊಸ ರಾಗಕ್ಕೆ `ಮನೋಹರ ರಾಗ ಎಂದು ಹೆಸರಿಟ್ಟರು.