ನಟಿ ರಮ್ಯಾ ಸಂಭ್ರಮದಿಂದ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡರು. ಅವರ ಜನ್ಮ ದಿನಾಂಕ ನವೆಂಬರ್. 29,1982 ಹಾಗಾಗಿ ಅವರು ಇದೀಗ 28ಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಈ ಬಾರಿಯ ಅವರ ಹುಟ್ಟು ಹಬ್ಬದ ಸಂಭ್ರಮ ನೋವು ನಲಿವುಗಳಿಂದ ಕೂಡಿದೆ. ಖುಷಿಯ ವಿಚಾರವೆಂದರೆ ಅವರು ಪ್ರಕಾಶ್ ರೈ ನಿರ್ದೇಶನದ ಮತ್ತು ಅಭಿನಯದ ಚಿತ್ರದಲ್ಲಿ ನಟಿಸುತ್ತಿರುವುದು.
ನೋವಿನ ಸಂಗತಿಯೆಂದರೆ ರಮ್ಯಾಳ ಅಭಿನಯದ ಹಲವು ಚಿತ್ರಗಳು ಇನ್ನೂ ಬಿಡುಗಡೆಯ ಭಾಗ್ಯ ಕಂಡಿಲ್ಲ. ತೆರೆ ಕಂಡ ಅವರ ಅಂತಿಮ ಚಿತ್ರ `ಅಂತೂ ಇಂತೂ ಪ್ರೀತಿ ಬಂತು. ಈ ಚಿತ್ರ ಬಿಡುಗಡೆಯಾದದ್ದು ಕಳೆದ ವರ್ಷ ಆಗಸ್ಟ್‌ನಲ್ಲಿ.
ಸದ್ಯಕ್ಕೆ ಕನ್ನಡದಲ್ಲಿ ರಮ್ಯಾ ಅಭಿನಯದ ಐದು ಚಿತ್ರಗಳು ತೆರೆ ಕಾಣ ಬೇಕಿರುವುದು ಆಶ್ಚರ್ಯದ ಸಂಗತಿ. ಇವುಗಳಲ್ಲಿ `ಉಲ್ಲಾಸ ಚಿತ್ರ ಮೊದಲನೆಯದು ನಂತರ `ಜೊತೆಗಾರ ಆನಂತರ `ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್. ಇನ್ನೂ ಚಿತ್ರೀಕರಣದ ಹಂತದಲ್ಲಿರುವ ಚಿತ್ರಗಳು `ಕಿಚ್ಚ ಹುಚ್ಚ, `ಜಸ್ಟ್ ಮಾತ್ ಮಾತಲ್ಲಿ, `ಸಂಜು ವೆಡ್ಸ್ ಗೀತಾ ಮತ್ತು `ನಾನೂ ನನ್ನ ಕನಸು.
ಇವುಗಳಲ್ಲಿ ಮೊದಲು ಯಾವ ಚಿತ್ರ ತೆರೆಕಾಣುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ.
ಅಂದಹಾಗೆ ನಾನೂ ನನ್ನ ಕನಸು ಚಿತ್ರ ರಮ್ಯಾಳ 30ನೇ ಚಿತ್ರ.