ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಂದಿನಿ ಎಂಬ ಮೂರು ಗುಟ್ಟಿನ ಬೆಡಗಿ (Nandini | 3 Guttu 1 Sullu 1 NIja | Chigurida kanasu)
ಸುದ್ದಿ/ಗಾಸಿಪ್
Bookmark and Share Feedback Print
 
ನಂದಿನಿ ನಿಮಗೆ ಗೊತ್ತಾ? ಅದೇ ಮೊನ್ನೆ ಮೊನ್ನೆ ಬಿಡುಗಡೆ ಕಂಡ 3 ಗುಟ್ಟು 1 ಸುಳ್ಳು 1 ನಿಜ ಚಿತ್ರದಲ್ಲಿ ನಟಿಸಿದಾಕೆ. ಈ ಚಿತ್ರದಲ್ಲಿ ಅವರು ಸೊಗಸಾಗಿ ನಟಿಸಿ ಪ್ರೇಕ್ಷಕರ ಮನಸೂರೆಗೊಂಡಿದ್ದುದು ನಿಜ. ಅಂದೊಮ್ಮೆ ಶಿವಣ್ಣನ ಚಿಗುರಿದ ಕನಸು ಚಿತ್ರದಲ್ಲಿ ಪೂರ್ಣ ಮಟ್ಟದ ನಟಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಂದಿನಿ, ಮೂರು ಗುಟ್ಟು... ಚಿತ್ರದಲ್ಲಿನ ಅವರ ಪಾಲಿನ ಪಾತ್ರವನ್ನು ಸೊಗಸಾಗಿ ನಿಭಾಯಿಸಿದ್ದಾರೆ. ಹೆಚ್ಚಾಗಿ ತಂಗಿ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಅವರು, ಹಾಸ್ಯದ ಲಹರಿಯಲ್ಲೂ ಸೈ ಎನಿಸಿಕೊಂಡಿದ್ದಾರೆ.

ನಂದಿನಿ, ಸಾಹಿತಿ ವಿಜಯ ನಾರಸಿಂಹ ಅವರ ಕುಟುಂಬದ ಕುಡಿ. ಇವರು ಆರೇಳು ವರ್ಷದವರಾಗಿದ್ದಾಗಲೇ ಮಣಿಕಂಠನ ಮಹಿಮೆ ಮತ್ತು ದುರ್ಗಾಪೂಜೆ ಚಿತ್ರಗಳಲ್ಲಿ ನಟಿಸಿದ್ದರು. ಕೆಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ನಂದಿನಿ, ನಾಗಾಭರಣ ನಿರ್ದೇಶನದ ಚಿಗುರಿದ ಕನಸು ನಂತರ ನೆನಪಿರಲಿ, ಆಕಾಶಗಂಗೆ, ಕ್ಷಣ ಕ್ಷಣ ಮುಂತಾದ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದಾರೆ.

ನಟಿಯಾಗಿ ಮಾತ್ರವಲ್ಲದೆ ಗಾಯಕಿ, ಡಬ್ಬಿಂಗ್ ಕಲಾವಿದೆಯಾಗಿಯೂ ಸಹ ಅವರ ಪ್ರತಿಭೆ ಸಾಕಾರಗೊಂಡಿದೆ. ಹೊಂಗನಸು ಚಿತ್ರದ ಮೂಲಕ ತಮ್ಮ ಡಬ್ಬಿಂಗ್ ಕಲೆಯನ್ನು ಪ್ರಾರಂಭಿಸಿದರು. ಇದೆಲ್ಲದರ ಜೊತೆಗೆ ನಂದಿನಿ ಓದನ್ನು ಸಹ ಮುಂದುವರೆಸಿದ್ದಾರೆ ಇದೀಗ ಅವರು ಎಂಎಸ್ಸಿ ದ್ವಿತೀಯ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದರೆ. ಪದವಿ ಜೊತೆಗಿದ್ದರೆ ಭವಿಷ್ಯ ಗಟ್ಟಿ ಇರುತ್ತೆ ಎಂಬ ನಂಬಿಕೆ ಅವರದ್ದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಂದಿನಿ, ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ, ಚಿಗುರಿದ ಕನಸು