ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಐತಲಕ್ಕಡಿಗೆ ಹೆಜ್ಜೆ ಹಾಕಿದ ಬಹು ಕಲಾವಿದರು (Aithalakkadi | Bullet Prakash | Rangayana Raghu)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಐತಲಕ್ಕಡಿ ಚಿತ್ರದ ಮುಹೂರ್ತದ ದಿನದಂದೇ, ಚಿತ್ರದಲ್ಲಿ ಸಿಕ್ಕಾಪಟ್ಟೆ ತಾರೆಯರು ನಟಿಸುತ್ತಾರೆ ಎಂದು ಘೋಷಿಸಲಾಗಿತ್ತು. ಅಂತೂ ನಿರ್ದೇಶಕ ಜೆ.ಜಿ ಕೃಷ್ಣ ಹೇಳಿದಂತೆ ವಿವಿಧ ಕಲಾವಿದರು ಇದೀಗ ಐತಲಕ್ಕಡಿ ಚಿತ್ರದ ಸೆಟ್ಟಿಗೆ ಬರಲಾರಂಭಿಸಿದ್ದಾರೆ.

ಈ ಚಿತ್ರದ ಹಾಡಿಗೆ ಹಿರಿಯ ನಟರಾದ ಜಗ್ಗೇಶ್, ರವಿಚಂದ್ರನ್ ಈಗಾಗಲೇ ಬಂದು ಕುಣಿದು ಹೋಗಿದ್ದಾರೆ. ಮೊನ್ನೆ ಸುದೀಪ್ ಕೂಡ ಬಂದು ಚಿತ್ರದ ಹಾಡಿಗೆ ಕುಣಿದು ಬಿಟ್ಟರು. ಬುಲೆಟ್ ಪ್ರಕಾಶ್ ಚೊಚ್ಚಲ ನಿರ್ಮಾಣವಾದ ಐತಲಕ್ಕಡಿ ಚಿತ್ರದಲ್ಲಿ ಪ್ರಕಾಶ್ ಜೊತೆ ರಂಗಾಯಣ ರಘು ಮುಖ್ಯ ಪಾತ್ರದಲ್ಲಿದ್ದಾರೆ. ಹಾಸ್ಯ ನಟ ಸಾಧು ಕೋಕಿಲ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ನೀತು ಹೂ ಮಾರುವ ಪಾತ್ರ ಮಾಡುತ್ತಿದ್ದಾರೆ.

ಸುದೀಪ್ ಆಯ್ತು, ವಿಜಯ ರಾಘವೇಂದ್ರರೂ ಐತಲಕ್ಕಡಿಗೆ ಕುಣಿದದ್ದಾಯ್ತು. ಮುಂದೆ ಯಾರು ಬರುತ್ತಾರೆಂಬುದು ಮಾತ್ರ ಸಸ್ಪೆನ್ಸ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐತಲಕ್ಕಡಿ, ಜಗ್ಗೇಶ್, ರವಿಚಂದ್ರನ್, ಸುದೀಪ್, ಬುಲೆಟ್ ಪ್ರಕಾಶ್, ರಂಗಾಯಣ ರಘು