ಆಗೊಮ್ಮೆ ಈಗೊಮ್ಮೆ ಸಖತ್ ಹಿಟ್ ಹಾಡುಗಳನ್ನು ನೀಡಿದ್ದ ಗೀತರಚನೆಕಾರ ನಾಗೇಂದ್ರ ಪ್ರಸಾದ್ ಈಗ ಚಿತ್ರ ನಿರ್ದೇಶನಕ್ಕೆ ಇಳಿಯುತ್ತಿದ್ದರೆ. ಅವರು ಶಿವರಾಜ್ ಕುಮಾರ್ ಅವರನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಮಾಡಿದ್ದಾರೆ ಎನ್ನುವುದು ವಿಶೇಷ.
ಶಿವರಾಜ್‌ಕುಮಾರ್ ಡೇಟ್ಸ್ ನೀಡಿದ ಕೂಡಲೇ ಚಿತ್ರಕ್ಕೆ ಮುಹೂರ್ತ ನಿಗದಿಪಡಿಸಲಿದ್ದಾರಂತೆ. ಉಳಿದ ಕಲಾವಿದರನ್ನು ಇನ್ನೂ ಅಯ್ಕೆ ಮಾಡಿಲ್ಲವಂತೆ.
ಅಂದಹಾಗೆ ಆ ಚಿತ್ರದ ಹೆಸರು ಪುಣ್ಯವಂತ. ಇದು ಥೇಟ್ ಅಣ್ಣಾವ್ರ ಬಂಗಾರದ ಮನುಷ್ಯನಂತೆ ಅನುಭವ ಆಗಲಿದೆಯೆಂಬುದು ಅವರ ಆಥ್ಮವಿಶ್ವಾಸದ ಮಾತು. ಇಂತಿಪ್ಪ ಪುಣ್ಯವಂತನಿಗೆ ಹರಿಕೃಷ್ಣರ ಸಂಗೀತ ಹಾಗೂ ಸ್ವತಃ ನಾಗೇಂದ್ರ ಪ್ರಸಾದ್ ಗೀತರಚನೆಯಿದೆಯಂತೆ.