ಹಿಂದೆ ಅಣ್ಣಾವ್ರು ಅಭಿನಯಿಸಿದ 'ನಾನೇ ರಾಜಕುಮಾರ' ಚಿತ್ರ ಆ ಕಾಲಕ್ಕೆ ಭರ್ಜರಿ ಯಶಸ್ಸು ಕಂಡಿತ್ತು. ಇದೇ ಶೀರ್ಷಿಕೆಯ ಹೊಸ ಚಿತ್ರದಲ್ಲಿ ಇದೀಗ ಅಣ್ಣಾವ್ರ ಹಿರಿಮಗ ಶಿವಣ್ಣ ಅಭಿನಯಿಸಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಶಿವರಾಜ್‌ಕುಮಾರ್, ಒಂದರ ಹಿಂದೆ ಒಂದರಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿರುವುದು ಚಿತ್ರ ಪ್ರೇಮಿಗಳಿಗೆಲ್ಲ ಗೊತ್ತಿರುವ ವಿಷಯವೇ. ಹಾಗೆಯೇ 'ನಾನೇ ರಾಜಕುಮಾರ' ಚಿತ್ರ ಕೂಡ. 'ದಿ ಕಿಂಗ್ ಆಫ್ ನೆಕ್ಟ್ಸ್' ಅನ್ನೋದು ಈ ಚಿತ್ರದ ಉಪ ಶೀರ್ಷಿಕೆ.
ಇದು ಡಾ.ರಾಜ್‌ಕುಮಾರ್ ಅವರಿಗೆ ಸಂಬಂಧಪಟ್ಟ ಚಿತ್ರ ಅಲ್ಲ ಎನ್ನುತ್ತಾರೆ ಈ ಚಿತ್ರದ ನಿರ್ದೇಶಕರಾದ ರಾಘವ ಲೋಕಿ. ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭಿಸಲಾಗುತ್ತದೆ ಎನ್ನುವ ಲೋಕಿ ಈ ಹಿಂದೆ ಗಿಲ್ಲಿ ಚಿತ್ರವನ್ನು ನಿರ್ದೇಶಿಸಿದ್ದರು.
ಗಿಲ್ಲಿ ಚಿತ್ರಕ್ಕಿಂತ ಮುಂಚಿತವಾಗಿಯೇ ನಾನೇ ರಾಜಕುಮಾರ ಮಾಡಬೇಕಿತ್ತಂತೆ. ಆದರೆ ಸಮಯ ಸಂದರ್ಭ ಕೂಡಿ ಬರದೆ ಕೈ ಬಿಡಲಾಯಿತಂತೆ. ಅಂತೂ ಶಿವರಾಜ್‌ಕುಮಾರ್ ಮಾತ್ರ ನಾನೇ ರಾಜಕುಮಾರ್... ಎಂದು ಹಾಡಲು ಹೊರಟಿದ್ದಾರೆ.