ಕನ್ನಡ ಚಿತ್ರರಂಗದಲ್ಲಿ ಬಂಗಾಳಿ ಬೆಡಗಿಯರ ಕಾರುಬಾರು ಇತ್ತೀಚೆಗೆ ಹೆಚ್ಚಾಗುತ್ತಿದೆ. ನಟಿ ಐಂದ್ರಿತಾ ರೇ ನಂತರ ಇದೀಗ ಮತ್ತೋರ್ವ ಬಂಗಾಳಿ ನಟಿ ಸುಮಾ ಗುಹಾ ಇಲ್ಲಿಗೆ ಆಗಮಿಸಿದ್ದಾರೆ. ಅವರು ಸ್ಯಾಂಡಲ್‌ವುಡ್ಡಿನಲ್ಲಿ ನಟಿಸುತ್ತಿರುವ ಮೊದಲ ಚಿತ್ರ ರಮೇಶ್ ಅಭಿನಯದ 'ಪ್ರೀತಿಯಿಂದ ರಮೇಶ್'. ಹೊರಗಿನ ನಟಿಯರೆಂದರೆ ಬಿಚ್ಚಮ್ಮಂದಿರು ಎಂಬ ಪರಿಕಲ್ಪನೆ ಸ್ಯಾಂಡಲ್‌ವುಡ್ಡಿನಲ್ಲಿ ಸಾಮಾನ್ಯವೇ. ಆದರೆ ಸುಮಾ ಗುಹಾ ಮಾತ್ರ ಅದ್ನನು ಸುಳ್ಳಾಗಿಸುತ್ತಾರಂತೆ. ತಾನು ಗ್ಲಾಮರಸ್ ಉಡುಗೆಗಳನ್ನು ತೊಟ್ಟರೂ, ಬಿಚ್ಚಮ್ಮನಾಗಲು ಇಲ್ಲಿಗೆ ಬಂದಿಲ್ಲ ಎಂಬುದು ಸುಮಾ ಗುಹಾರ ವೇದಾಂತ.
ಮಾಡೆಲಿಂಗ್ ಲೋಕದಲ್ಲಿ ಬಳುಕಾಡಿ ಮುಂಬೈನ ನಟನಾ ಶಾಲೆಯೊಂದರಲ್ಲಿ ಹಲವು ಸಮಯ ಕಳೆದು ನಂತರ ಚಿತ್ರರಂಗಕ್ಕೆ ಅವರು ಕಾಲಿಟ್ಟಿದ್ದಾರೆ. ಕೋಲ್ಕತ್ತಾದಲ್ಲಿ ಹುಟ್ಟಿ ಬೆಳೆದ ಸುಮಾ ಗುಹಾ ಸದ್ಯ ಮುಂಬೈಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಪ್ಪ ಡಾಕ್ಟರ್, ಅಮ್ಮ ಟೀಚರ್. ಇವಳೂ ಸಹ ಬಿಎಸ್ಸಿ ಕಲಿತಾಕೆ.
ತಮಿಳಿನ ದೊರೈ ಚಿತ್ರದಲ್ಲಿ ನಟಿಸಿದ ಸುಮಾಗುಹಾ ತಮ್ಮ ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಎಕ್ಸ್‌ಪೋಸ್ ಮಾತ್ರ ಮಾಡುವುದಿಲ್ಲವಂತೆ. ಆದರೆ ಜನರಿಗೆ ಹತ್ತಿರ ಆಗುವ ಪಾತ್ರಗಳನ್ನು ಮಾಡುವಾಸೆ ಈಕೆಗೆ.