ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ನಾನು ನನ್ನ ಕನಸು'ನಲ್ಲಿ ಬಣ್ಣ ಹಚ್ಚಲಿರುವ ಸಿತಾರಾ! (Sithara | Nanu Nanna Kanasu | Ramesh Aravind | Amoolya | Prakash Raj)
ಸುದ್ದಿ/ಗಾಸಿಪ್
Bookmark and Share Feedback Print
 
ಕನ್ನಡ ಚಿತ್ರರಂಗದಲ್ಲಿ ಬಹುಶಃ ಪ್ರೇಕ್ಷಕರನ್ನು ಶ್ರುತಿಯಷ್ಟೇ ಅಳಿಸಿದವರಲ್ಲಿ ಸಿತಾರಾ ಕೂಡಾ ಒಬ್ಬರು. ತನ್ನ ಪ್ರಬುದ್ಧ ನಟನೆಯಿಂದ ಒಂದು ಕಾಲದಲ್ಲಿ ಮನೆ ಮಾತಾಗಿದ್ದ ಸಿತಾರಾ ಬಹುಕಾಲದ ನಂತರ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಪ್ರಕಾಶ್ ರೈ ನಿರ್ದೇಶನದ ಭಾರೀ ಸುದ್ದಿ ಮಾಡುತ್ತಿರುವ ನಾನು ನನ್ನ ಕನಸು ಚಿತ್ರದಲ್ಲಿ ಸಿತಾರಾ ಬಣ್ಣ ಹಚ್ಚಲಿದ್ದಾರೆ.

ನಾನು ನನ್ನ ಕನಸು ಚಿತ್ರದಲ್ಲಿ ಸಿತಾರಾ ನಾಯಕಿಯ ತಾಯಿಯ ಪಾತ್ರದಲ್ಲಿ ಬರುತ್ತಿದ್ದಾರೆ. ಅರ್ಥಾತ್ ಅಮೂಲ್ಯರ ತಾಯಿ ಹಾಗೂ ಪ್ರಕಾಶ್ ರೈ ಅವರ ಹೆಂಡತಿಯಾಗಿ ಸಿತಾರಾ ಬಣ್ಣಹಚ್ಚಲಿದ್ದಾರೆ. ತಮಿಳಿನ ಜನಪ್ರಿಯ ಸಿನಿಮಾ ಅಭಿಯುಂ ನಾನುಂ ಚಿತ್ರದ ರಿಮೇಕಾಗಿರುವ ನಾನು ನನ್ನ ಕನಸು ಈಗ್ಗೆ ಎರಡು ದಿನಗಳಿಂದ ಭಾರೀ ಸುದ್ದಿಯಾಗುತ್ತಿದ್ದು, ನಾಯಕಿಯಾಗಿ ಆಯ್ಕೆಯಾಗಿದ್ದ ರಮ್ಯಾ ಎತ್ತಂಗಡಿಯಾಗಿ ಆ ಸ್ಥಾನಕ್ಕೆ ಅಮೂಲ್ಯ ಎಂಬ ಅಮುಲ್ ಬೇಬಿ ಬಂದಿದ್ದು ಗೊತ್ತೇ ಇದೆ.

ಈ ಚಿತ್ರದಲ್ಲಿ ರಮೇಶ್ ಅರವಿಂದ್ ಕೂಡಾ ಬಣ್ಣ ಹಚ್ಚಲಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಶಿಷ್ಯರಾಗಿದ್ದ ರಮೇಶ್ ಹಾಗೂ ಪ್ರಕಾಶ್ ರೈ ಒಂದು ಕಾಲದಲ್ಲಿ ಜೊತೆಗೇ ಬೆಳೆದವರು, ಹಾಗೂ ತಮಿಳಿನಲ್ಲಿ ಡ್ಯುಯೆಟ್ ಚಿತ್ರಕ್ಕಾಗಿ ಜೊತೆಗೇ ಬಣ್ಣ ಹಚ್ಚಿದವರು. ಈಗ ಮಾತೃಭಾಷೆ ಕನ್ನಡದಲ್ಲಿ ಜೊತೆಯಾಗಿ ಬಣ್ಣಹಚ್ಚುವ ಸರದಿ ಈ ಇಬ್ಬರದ್ದು. ಈ ಚಿತ್ರದಲ್ಲಿ ರಮೇಶ್ ಪುಟ್ಟ ಪಾತ್ರದಲ್ಲಿ ನಟಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿತಾರಾ, ನಾನು ನನ್ನ ಕನಸು, ರಮೇಶ್ ಅರವಿಂದ್, ಅಮೂಲ್ಯ, ಪ್ರಕಾಶ್ ರೈ