ಕನ್ನಡಿಗರ ತಂಡವೊಂದು ಎಲ್ಲಿಯೂ ಗೊತ್ತಾಗದಂತೆ ಕಲ್ಯಾಣಂ ಪರಿಸುಳ ಎಂಬ ತಮಿಳು ಚಿತ್ರವೊಂದನ್ನು ತಯಾರಿಸುತ್ತಿದೆ. ಮದುವೆಯ ಉಡುಗೊರೆ ಎಂಬುದು ಈ ಶೀರ್ಷಿಕೆಯ ಅರ್ಥ.
ಈ ಚಿತ್ರದ ನಾಯಕನಾಗಿ ನಾಗಕಿರಣ್ ಹಾಗೂ ನಾಯಕಿಯರಾಗಿ ರೂಪಶ್ರೀ ಮತ್ತು ದೀಪ ನಟಿಸುತ್ತಿದ್ದಾರೆ. ಮಸ್ತಾನ್ ಈ ಚಿತ್ರದ ನಿರ್ದೇಶಕರು. ನಿರ್ಮಾಪಕ ರಾಮಸ್ವಾಮಿ ಮಾತ್ರ ತಮಿಳು ಚಿತ್ರರಂಗದವರು. ಉಳಿದವರೆಲ್ಲ ನಮ್ಮ ಕನ್ನಡದವರೇ. ರವಿಕುಮಾರ್ ಛಾಯಾಗ್ರಹಣವಿದ್ದು, ಭವ್ಯ, ಬಿಂದು ಮತ್ತಿತರರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದೀಗ ಈ ಚಿತ್ರ ತಂಡ ಮಲೇಶಿಯಾದ ಸುಂದರ ತಾಣಗಳಲ್ಲಿ ಚಿತ್ರೀಕರಣದಲ್ಲಿ ತೊಡಗಿದೆ. ಅಂತೂ ನಾಗಕಿರಣ್ ತಮಿಳಿಗೆ ಪರಿಚಯವಾಗಲು ಹೊರಟಿದ್ದಾರೆ.