ಭರ್ಜರಿ ಯಶಸ್ಸು ಕಂಡ ರವಿ ಶ್ರೀವತ್ಸ ನಿರ್ದೇಶನದ ಡೆಡ್ಲಿ ಸೋಮ ಚಿತ್ರದಲ್ಲಿ ನಟ ಆದಿತ್ಯ ಮತ್ತು ನಟಿ ರಕ್ಷಿತಾ ನಟಿಸಿದ್ದರು. ಇದೇ ಚಿತ್ರದ ಮತ್ತೊಂದು ಮುಂದುವರೆದ ಭಾಗವನ್ನು ನಿರ್ದೇಶಿಸಲು ರವಿ ಶ್ರೀವತ್ಸ ನಿರ್ಧರಿಸಿದ್ದಾರೆ.
ಹೆಚ್ಚು ಕಮ್ಮಿ ಅದೇ ಚಿತ್ರತಂಡ ಭಾಗ- 2ರಲ್ಲೂ ಕೆಲಸ ಮಾಡಲಿದೆ. ಆದರೆ ನಾಯಕಿ ರಕ್ಷಿತಾರನ್ನು ಹೊರತುಪಡಿಸಿ. ರಕ್ಷಿತಾ ಮದುವೆಯಾದ ಮೇಲೆ ನಟನೆಯನ್ನು ಬಿಟ್ಟಿದ್ದು ಗೊತ್ತೇ ಇದೆ. ಹೀಗಾಗಿ ಆಕೆ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಅವರ ಜಾಗವನ್ನು ಯಾರು ತುಂಬುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಜಾಕ್ ಮಂಜುನಾಥ್ ಎಂಬುವವರು ಈ ಚಿತ್ರದ ನಿರ್ಮಾಪಕರಾಗಿದ್ದು, ಇದೇ ಭಾನುವಾರ ಸೋಮನಿಗೆ ಮೂಹೂರ್ತ ಇಡಲು ನಿರ್ಧರಿಸಿದ್ದಾರೆ.