ಗೋಕುಲ ಚಿತ್ರದ ನಾಯಕರಲ್ಲಿ ಒಬ್ಬರಾದ ಯಶ್ ಮೊನ್ನೆ ಇದ್ದಕ್ಕಿದ್ದಂತೆ ಕಾಣೆಯಾಗಿಬಿಟ್ಟಿದ್ದರು. ಗೋಕುಲದ ಬಿಡುಗಡೆಯ ದಿನವೂ ಅವರು ಯಾರ ಕಣ್ಣಿಗೂ ಕಾಣಲಿಲ್ಲ. ಎಲ್ಲಿ ಹೋದರೆಂದು ವಿಚಾರಿಸುವ ಸಲುವಾಗಿ ಅವರಿಗೆ ಫೋನಾಯಿಸಿದಾಗ 'ನಾನು ಎಲ್ಲಿಯೂ ಹೋಗಿಲ್ಲ, ಮಡಿಕೇರಿಯಲ್ಲಿ ಇದ್ದೇನೆ. ಮೊದಲಾಸಲಾ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ' ಎಂದರು.
ಮೊದಲು ನನ್ನ ಕೆಲಸ ಮುಖ್ಯ ಎನ್ನುವ ಯಶ್, ಚಿತ್ರೀಕರಣ ಇದ್ದ ಕಾರಣ ಫಿಲ್ಮ್‌ಫೇರ್ ಅವಾರ್ಡ್ ತೆಗೆದುಕೊಳ್ಳಲು ಸಹ ಆ ಕಾರ್ಯಕ್ರಮಕ್ಕೆ ಹೋಗಿರಲಿಲ್ಲವಂತೆ. ನಿರ್ಮಾಪಕರು ನನ್ನನ್ನು ನಂಬಿ ಹಣ ಹಾಕಿರುತ್ತಾರೆ. ಹಾಗಾಗಿ ಮೊದಲು ಕೆಲಸ ನಂತರ ಉಳಿದದ್ದು ಎನ್ನುತ್ತಾರೆ.
ಎಲ್ಲ ಸರಿ ಮಡಿಕೇರಿಯಲ್ಲಿ ಯಾವ ದೃಶ್ಯದಲ್ಲಿ ಮಗ್ನರಾಗಿದ್ದಿರಾ? ಎಂಬ ಪ್ರಶ್ನೆಗೆ ಯಶ್, ಅದು ನಾಗೇಂದ್ರ ಪ್ರಸಾದ್ ಅವರು ನವಿಲಿನ ಬಗೆಗೆ ರಚಿಸಿದ ಹಾಡಿಗೆ ನಾಯಕಿ ಭಾಮ ಕುಣಿಯುವುದನ್ನು ನೋಡಲು ಹೋಗಿರುವುದಾಗಿ ಹೇಳಿದರು. ಪುರುಷೋತ್ತಮ್ ಈ ಚಿತ್ರದ ನಿರ್ದೇಶಕರು. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.