ಸೈನೈಡ್ ಖ್ಯಾತಿಯ ಎ.ಎಂ.ಆರ್.ರಮೇಶ್ ತಮ್ಮ ಬಹುದಿನಗಳ ಕನಸಿನ ಚಿತ್ರ ಪೊಲೀಸ್ ಕ್ವಾಟರ್ಸ್ ಚಿತ್ರದ ಜೊತೆಗೆ ನಮ್ ಏರಿಯಾಲ್ ಒಂದಿನಾ ಚಿತ್ರವನ್ನೂ ಬಿಡುಗಡೆ ಮಾಡಲು ಬಯಿಸಿದ್ದಾರೆ. ಈ ಎರಡೂ ಚಿತ್ರಗಳಿಗೆ ಅನೀಶ್ ನಾಯಕ ಎಂಬುದು ವಿಶೇಷ.
ಡಿಸೆಂಬರ್ 25ರಂದು ಪೊಲೀಸ್ ಕ್ವಾಟರ್ಸ್ ಬಿಡುಗಡೆಯಾದರೆ, ತಾಂತ್ರಿಕ ಕೆಲಸ ಮುಗಿಸಿದ ತಕ್ಷಣವೇ ನಮ್ ಏರಿಯಾಲ್ ಒಂದಿನಾ ಬಿಡುಗಡೆಯಾಗಲಿದೆ.
ಈಗಾಗಲೇ ಪೊಲೀಸ್ ಕ್ವಾಟರ್ಸ್ ಚಿತ್ರಕ್ಕೆ ಯು ಸರ್ಟಿಫಿಕೇಟ್ ದೊರೆತಿದೆಯಂತೆ. ಈ ಚಿತ್ರದ ಬಿಡುಗಡೆಗೂ ಮುನ್ನ ರಮೇಶ್, ಮೊದಲು ಮಾಧ್ಯಮ ಮಿತ್ರರಿಗೆ ತೋರಿಸಲಿದ್ದಾರಂತೆ. ಇದೇ ರೀತಿಯ ಪ್ರೀಮಿಯರ್ ಶೋವನ್ನು ಸೈನೈಡ್ ಚಿತ್ರಕ್ಕೂ ಅವರು ಏರ್ಪಡಿಸಿದ್ದರು.
ರಮೇಶ್ ಅವರ ಚಿತ್ರದಲ್ಲಿ ನಟಿಸಿರುವುದಕ್ಕೆ ನಟ ಅನೀಶ್‌ಗೆ ಸಿಕ್ಕಾಪಟ್ಟೆ ಸಂತೋಷವಾಗಿದೆ. ರಮೇಶ್ ಚಿತ್ರದಲ್ಲಿ ನಟಿಸುವುದೇ ಅನೀಶ್‌ಗೆ ಹೊಸ ಅನುಭವವಂತೆ. ನಾಯಕಿ ಸೋನುಗೂ ಸಹ ಈ ಚಿತ್ರ ಮುಂದೆ ಉತ್ತಮ ಅವಕಾಶಗಳನ್ನು ಅವರಿಗೆ ಒದಗಿಸಿಕೊಡಲಿದೆ ಎಂಬ ನಂಬಿಕೆ ಅವರದ್ದು.