ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಂಗಾರು ಬಗ್ಗೆ ಅನಂತ್‌ನಾಗ್ ಶಹಬ್ಬಾಸ್‍ಗಿರಿ (Bangaru | Ananthnag | Kalgejje)
ಸುದ್ದಿ/ಗಾಸಿಪ್
Bookmark and Share Feedback Print
 
Kalgejje Team
MOKSHA
''ನಿಮ್ಮ ಚಿತ್ರ ಗೆಲ್ಲಲೇಬೇಕು. ಅದಕ್ಕೆ ಆ ತಾಕತ್ತಿದೆ. ಚಿತ್ರದ ಪ್ರಚಾರಕ್ಕೆ ಕರೆದರೆ ನಾನು ಬರಲು ರೆಡಿ.'' ಇದನ್ನು ಹೇಳಿದವರು ಖುದ್ದು ಅನಂತನಾಗ್.

ಬಂಗಾರು ಅವರ ಮೊದಲ ನಿರ್ದೇಶನದ ಕಾಲ್ಗೆಜ್ಜೆ ಚಿತ್ರದಲ್ಲಿ ಅನಂತ್‌ನಾಗ್ ಅವರಿಂದ ಅಭಿನಯಿಸಬೇಕು ಎಂದುಕೊಂಡಿದ್ದರಂತೆ. ಅದಕ್ಕಾಗಿ ಅವರನ್ನು ಸಂಪರ್ಕಿಸಿ, ನಟಿಸಬೇಕೆಂದು ಮನವಿಯನ್ನೂ ಮಾಡಿಕೊಂಡಿದ್ದರು. ಆದರೆ ಅನಂತ್‌ನಾಗ್ ಮಾತ್ರ ಬಿಲ್‌ಕುಲ್ ಆಗುವುದಿಲ್ಲ ಎಂದಿದ್ದರಂತೆ.

ಅಂತಿಮವಾಗಿ ಬಂಗಾರು, ಅನಂತ್ ಅವರಿಗೆಂದೇ ರಚಿಸಿದ 12 ಸನ್ನಿವೇಶಗಳ ಚಿತ್ರಕಥೆಯನ್ನು ಕಳುಹಿಸಿಕೊಟ್ಟರಂತೆ. ಅದೇನು ಅನ್ನಿಸಿತೋ ಅನಂತ್ ಪ್ರತಿರೋಧಿಸದೇ ತಕ್ಷಣವೇ ಒಪ್ಪಿಕೊಂಡುಬಿಟ್ಟರಂತೆ.

ಚಿತ್ರೀಕರಣ ಮಾಡಿ ಅದನ್ನು ಬಿಡುಗಡೆ ಮಾಡುವುದು ದೊಡ್ಡದಲ್ಲ. ಆದರೆ ಹಿರಿಯ ನಟರು ನಮ್ಮ ಚಿತ್ರ ಮೆಚ್ಚಿಕೊಳ್ಳುವುದಿದೆಯಲ್ಲ ಅದು ದೊಡ್ಡದು ಎನ್ನುತ್ತಾ ಇದೀಗ ಬೀಗುತ್ತಿದ್ದಾರಂತೆ ಬಂಗಾರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಂಗಾರು, ಅನಂತನಾಗ್, ರೂಪಿಕಾ, ಕಾಲ್ಗೆಜ್ಜೆ