'ಜಂಭದ ಹುಡುಗಿ' ಪ್ರಿಯಾ ಹಾಸನ್ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದು ಗೊತ್ತೇ ಇದೆ. ನಂತರ ನಿರ್ದೇಶಕಿಯೂ ಆಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಕೆಲವೇ ಮಹಿಳೆರಲ್ಲಿ ಪ್ರಿಯಾ ಒಬ್ಬರೆನಿಸಿಕೊಂಡರು.
ಇದೀಗ ಇವರ ಬಿಂದಾಸ್ ಹುಡುಗಿ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ನೆಲಮಂಗಲದ ಬಳಿ ಚಿತ್ರತಂಡ ಹಾಡಿಗಾಗಿ ಹೊಸ ಪಟ್ಟಣದ ಸೆಟ್ ಹಾಕಿಸಿತ್ತು. ಆ ಸೆಟ್‌ನಲ್ಲಿ ಮಾರುಕಟ್ಟೆ ಹಾಗೂ ಜಾತ್ರೆಯ ಸಂಭ್ರಮವೂ ಇತ್ತು. ಇದೇ ಸಂದರ್ಭದಲ್ಲಿ ನಾಯಕಿ ಪ್ರಿಯಾ ಹಾಸನ್ ನಾಗೇಂದ್ರ ಪ್ರಸಾದ್ ರಚಿಸಿದ ಗೀತೆಗೆ ಸಂಗಡಿಗರೊಂದಿಗೆ ಹೆಜ್ಜೆ ಹಾಕಿದರು.
ನಾಯಕಿಯನ್ನು ಪರಿಚಯಿಸುವ ಹಾಗೂ ಶೀರ್ಷಿಕೆ ಗೀತೆಯೂ ಆಗಿರುವ ಈ ಹಾಡಿಗೆ ಶಿವಾಜಿ ನೃತ್ಯ ಸಂಯೋಜಿಸಿದ್ದಾರೆ. ಗೌರಮ್ಮ ಹಾಗೂ ಮೋಹನ್ ಗೌಡ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆರ್.ಗಿರಿ ಛಾಯಾಗ್ರಹಣ, ಬಾಬು ಸಂಕಲನ, ಕೌರವ ವೆಂಕಟೇಶ್ ಸಾಹಸ, ಬಿ.ಎ.ಮಧು ಸಂಭಾಷಣೆ ಹಾಗೂ ಜಯಂತ್ ಕಾಯ್ಕಿಣಿ ಮತ್ತು ನಾಗೇಂದ್ರ ಪ್ರಸಾದ್ ಗೀತೆ ರಚನೆಯಿದೆ. ಜಯಂತಿ, ಗಿರಿಜಾ ಲೊಕೇಶ್, ಶರಣ್ ಮುಂತಾದವರು ತಾರಾಗಣದಲ್ಲಿದ್ದಾರೆ.