ನಿರ್ಮಾಪಕನ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಹಾಯಕ್ಕಾಗಿ ಓರ್ವ ಹೀರೋ ಹೆಚ್ಚೆಂದರೆ ಏನು ಮಾಡಬಹುದು ಹೇಳಿ? ಆದರೆ ಅನೀಶ್ ಮಾತ್ರ, ಚಿತ್ರದ ವಿತರಣೆ ಹಾಗೂ ಬಿಡುಗಡೆ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳಬೇಕು ಎನ್ನುತ್ತಾರೆ!
ಹೌದು, ಅನೀಷ್ ನಾಯಕನಾಗಿ ನಟಿಸಿರುವ 'ನಮ್ ಎರಿಯಾಲ್ ಒಂದಿನ' ಚಿತ್ರದ ವಿತರಣೆ ಹಾಗೂ ಬಿಡುಗಡೆ ಮಾಡುವುದಕ್ಕೆ ಮುಂದೆ ನಿಂತಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನದ ಈ ಚಿತ್ರ ಪದೇ ಪದೇ ಬಿಡುಗಡೆಯ ದಿನಗಳನ್ನು ಮುಂದೂಡುತ್ತಿರುವುದರಿಂದ ನಾನೇ ಬಿಡುಗಡೆಗೆ ಮುಂದೆ ಬಂದಿದ್ದೇನೆ ಎಂದರು ಅನೀಷ್.
ಅನೀಷ್ ಮೊದಲು ನಟಿಸಿದ್ದು ಟಾಲಿವುಡ್ಡಿನಲ್ಲಿ. ಅಲ್ಲಿ ಅವರು ನಟಿಸಿದ ಚಿತ್ರ 'ನಿನ್ನ ಸುಚಿನಾಕ'. 'ನಮ್ ಏರಿಯಾಲ್ ಒಂದಿನ' ಚಿತ್ರ ಸೊಗಸಾಗಿ ಮೂಡಿಬಂದಿದೆ ಎಂಬ ಆತ್ಮವಿಶ್ವಾಸ ಅನೀಶ್‌ದು. ಇದೆಲ್ಲ ನಿಜವಾಗುವುದು ಚಿತ್ರ ಬಿಡುಗಡೆಯಾದ ಮೇಲೆಯೇ ಎಂದು ಅನೀಷ್ ಪ್ರೇಕ್ಷಕರಿಗೇ ನಿರ್ಧಾರ ಬಿಡುತ್ತಾರೆ.