ಕನ್ನಡ ಚಿತ್ರಕ್ಕೆ ಸಹಿ ಹಾಕಿಲ್ಲ: ಜಯಮಾಲಾ ಪುತ್ರಿ ಸೌಂದರ್ಯ
ಈ ಹಿಂದೆ ಪುನೀತ್ ನಾಯಕನಾಗಿ ನಟಿಸಲಿರುವ ಲಗೋರಿ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ ಎಂಬ ಸುದ್ದಿ ಹಬ್ಬಿತ್ತು . ಅದರ ಜೊತೆಗೆ, ಈ ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ಜಯಮಾಲ ಅವರ ಪುತ್ರಿ ಸೌಂದರ್ಯ ನಟಿಸಲಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ದುರಾದೃಷ್ಟವೆಂಬಂತೆ ಲಗೋರಿ ಸೆಟ್ಟೇರಲೇ ಇಲ್ಲ.
ಇದೀಗ ಮತ್ತೊಮ್ಮೆ ಸೌಂದರ್ಯ ಇಂಥದ್ದೊಂದು ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದಾರೆ. ಭರತ್ ಅವರ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಅವರು ನಟಿಸುತ್ತಿದ್ದಾರೆ ಎಂಬ ಗುಸು ಗುಸು ಗಾಂಧಿನಗರದಿಂದ ಕೇಳಿಬರುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸೌಂದರ್ಯ, ನನಗೆ ಇದರ ಬಗ್ಗೆ ಏನೂ ತಿಳಿದಿಲ್ಲ. ಅಲ್ಲದೆ ಕಥೆಗಳು ಇಷ್ಟವಾಗದ ಕಾರಣ, ಇದುವರೆಗೂ ಯಾವ ನಿರ್ಮಾಪಕರಿಗೂ ಡೇಟ್ಸ್ ನೀಡಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.
ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ಅವರು, ಯಾವುದೇ ಕಾರಣಕ್ಕೂ ಅಮ್ಮ- ಮಗಳು ಕಥೆ ಇಷ್ಟಪಡದೇ ಯಾವ ಚಿತ್ರವನ್ನೂ ಒಪ್ಪಿಕೊಳ್ಳುವುದಿಲ್ಲವಂತೆ.