ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿತ್ರ ಗೆಲ್ಲೋದು ಉತ್ತಮ ಕಥೆಯಿಂದ, ಹೀರೋನಿಂದಲ್ಲ! (N.Kumar | Kannada Cinema | Mungaru Male | Duniya)
ಸುದ್ದಿ/ಗಾಸಿಪ್
Bookmark and Share Feedback Print
 
ಯಾವುದೇ ಚಿತ್ರವಿರಲಿ ಅದು ಗೆಲ್ಲುವುದು ಉತ್ತಮ ಕಥೆಯ ಮೇಲೇ ಹೊರತು ಬಜೆಟ್ ಅಥವಾ ಹೀರೋ ಮೇಲೆ ಅಲ್ಲ ಎನ್ನುತಾರೆ ನಿರ್ಮಾಪಕ ಹಾಗೂ ವಿತರಕ ಎನ್.ಕುಮಾರ್.

ಅದು ಅವರು ತಮ್ಮ ಅನುಭವದಿಂದ ಕಂಡುಕೊಂಡ ಸತ್ಯವಂತೆ. ಕಥೆ ಇದ್ದರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ನಾಯಕರು ಹೊಸಬರಿದ್ದರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲವಂತೆ. ಇದಕ್ಕೆ ಉದಾಹರಣೆಯಾಗಿ 'ಮುಂಗಾರು ಮಳೆ' ಮತ್ತು 'ದುನಿಯಾ' ಚಿತ್ರಗಳು ಎಂಬುದೇ ಎನ್.ಕುಮಾರ್ ವಾದ.

ಚಲನಚಿತ್ರ ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರು ಏರ್ಪಡಿಸಿದ್ದ ಅಮೃತ ಮಂಥನ ಕಾರ್ಯಕ್ರಮದಲ್ಲಿ ಕುಮಾರ್ ಮಾತನಾಡಿದರು. ಚಿತ್ರಗಳಿಗೆ ಖರ್ಚು ಮಾಡುವುದನ್ನು ಕಡಿಮೆ ಮಾಡಿ ಕಥೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ಕರೆ ನೀಡಿದರು.

ನಿರ್ದೇಶಕರಾದವರು ನಿರ್ಮಾಪಕರ ಹಿತ ಕಾಯಬೇಕು, ನಾವು ಸಹ ಅವರು ಕೋರಿದ್ದನ್ನು ನೀಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಮತ್ತೊಬ್ಬ ನಿರ್ಮಾಪಕ ಜಯಣ್ಣ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎನ್ಕುಮಾರ್, ಕನ್ನಡ ಸಿನಿಮಾ, ಮುಂಗಾರು ಮಳೆ, ದುನಿಯಾ