ಎಸ್.ಎಸ್.ಕಂಬೈನ್ಸ್ ಲಾಂಛನದಡಿಯಲ್ಲಿ ದಿನೇಶ್ ಗಾಂಧಿ ನಿರ್ಮಿಸುತ್ತಿರುವ ರವಿಚಂದ್ರನ್ ನಿರ್ದೇಶನ ಹಾಗೂ ಅಭಿನಯದ 'ಹೂ' ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ಆರಂಭವಾಗಿದೆ. ಬೆಂಗಳೂರಿನಲ್ಲಿ ಇದೇ ಚಿತ್ರದ ಹಾಡೊಂದರ ಚಿತ್ರೀಕರಣ ನಡೆದಿದೆ.
ನಗರದ ಮಿನರ್ವ ಮಿಲ್ ಆವರಣದಲ್ಲೊಂದು ಭವ್ಯವಾದ ಬಂಗಲೆ. ಆ ಬಂಗಲೆಯಲ್ಲಿ ಸಡಗರದ ವಾತಾವರಣ. ಅಲ್ಲಿ ರವಿಚಂದ್ರನ್ ಅವರು ಬರೆದಿರುವ ಹಾಡಿನ ಚಿತ್ರೀಕರಣ. ರವಿಚಂದ್ರನ್ ಅವರೇ ಬರೆದ ಹಾಡಿಗೆ ನಾಯಕಿ ನಮಿತಾರೊಂದಿಗೆ ಹೆಜ್ಜೆ ಹಾಕಿದರು.
ರವಿಚಂದ್ರನ್ ಅವರೇ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಹರಿಕೃಷ್ಣ ಸಂಗೀತ, ಸಿತಾರಾಂ ಛಾಯಾಗ್ರಹಣವಿದೆ. ಮೀರಾ ಜಾಸ್ಮಿನ್, ತಮಿಳು ಚಿತ್ರರಂಗದ ಸೆಕ್ಸೀ ತಾರೆ ನಮಿತಾ, ರಂಗಾಯಣ ರಘು, ಸಾಧು ಕೋಕಿಲಾ, ಬುಲೆಟ್ ಪ್ರಕಾಶ್ ಮುಂತಾದವರು ಪ್ರಮುಖ ರಾಗಣದಲ್ಲಿದ್ದಾರೆ.