ಇದು ವಿಚಿತ್ರವೋ, ಕೇವಲ ಕಾಕತಾಳೀಯವೋ ಗೊತ್ತಿಲ್ಲ. ಒಟ್ಟಾರೆ, ಕನ್ನಡ ಚಿತ್ರ ಪ್ರೇಮಿಗಳಿಗೆ ಸದ್ಯದಲ್ಲೇ ರಾಮಾಯಣದಲ್ಲಿ ಬರುವ ಹೆಸರುಗಳ ಚಿತ್ರಗಳು ಮನರಂಜನೆ ನೀಡಲು ಸಿದ್ಧವಾಗಿವೆ. ಈ ಡಿಸೆಂಬರ್ ತಿಂಗಳಿನಲ್ಲಿ ರಾಮಾಯಣದ ಮೂರು ಪಾತ್ರಗಳ ಹೆಸರಿಟ್ಟುಕೊಂಡ ಮೂರು ಕನ್ನಡ ಚಿತ್ರಗಳು ಬೆಳ್ಳಿ ತೆರೆಗೆ ಬರುತ್ತಿವೆ. 'ರಾವಣ' ಈಗಾಗಲೇ ಬಿಡುಗಡೆಯಾಗಿದೆ. 'ರಾಮ್' ಬಹುಶಃ ಮುಂದಿನ ವಾರ ತೆರೆಕಾಣುವ ನಿರೀಕ್ಷೆಯಿದೆ. 'ಸುಗ್ರೀವ' ಡಿಸೆಂಬರ್ 18 ಅಥವಾ 25ರಂದು ತೆರೆಗೆ ಬರುವುದು ನಿಶ್ಚಿತವಾಗಿದೆ!
MOKSHA
'ರಾವಣ'ನ ಮೂಲಕ ಯೋಗೀಶ್, 'ರಾಮ್' ಮೂಲಕ ಪುನೀತ್ ರಾಜ್‌ಕುಮಾರ್ ಮತ್ತು 'ಸುಗ್ರೀವ'ನ ಮೂಲಕ ಶಿವರಾಜ್‌ಕುಮಾರ್ ಥಿಯೇಟರಿನತ್ತ ಲಗ್ಗೆಯಿಟ್ಟಾಗಿದ್ದಾರೆ. ಇಲ್ಲೂ ಸಹ ಥೇಟ್ ಪುರಾಣದಂತೆಯೇ ಮೊದಲು ರಾವಣನ ಎಂಟ್ರಿ ಆಗಿದೆ. ರಾವಣನ ಎಂಟ್ರಿ ನಂತರ ರಾಮ ಆತನ ಸಂಹಾರಕ್ಕಾಗಿ ಬರುತ್ತಾನೆ. ರಾಮನ ಹಾದಿಯಲ್ಲಿ ರಾಮನಿಗೆ ಸಹಾಯ ಒದಗಿಸುವವನೇ ಸುಗ್ರೀವ. ಹೀಗೆ ರಾವಣ, ರಾಮ, ಸುಗ್ರೀವರ ಪುರಾಣದ ಎಂಟ್ರಿಯಂತೆಯೇ ಇಲ್ಲೂ ಸಹ ಅದೇ ಸಾಲಿನಲ್ಲಿ ಅವೇ ಹೆಸರಿನ ಚಿತ್ರಗಳು ಬಿಡುಗಡೆಯಾಗುತ್ತಿರೋದು ವಿಶೇಷ.
ಹಾಂ, ಅಂದ ಹಾಗೆ ಬರಗೂರು ರಾಮಚಂದ್ರಪ್ಪ ಅವರ 'ಶಬರಿ' ಎಂಬ ಚಿತ್ರವೂ ಸದ್ಯದಲ್ಲೇ ಬಿಡುಗಡೆ ಕಾಣುವ ನಿರೀಕ್ಷೆಯಲ್ಲಿದೆ. ರಾಮಾಯಣದಲ್ಲಿ ಶಬರಿಯಂತಹ ರಾಮಭಕ್ತೆಯ ಪಾತ್ರವೂ ಇರೋದು ಇಲ್ಲಿ ಗಮನಾರ್ಹ!