ಯುವ ನಾಯಕ ನಟ ಚಿರಂಜೀವಿ ಸರ್ಜಾ ಈ ಹಿಂದೆ ವಾಯುಪುತ್ರ ಚಿತ್ರದಲ್ಲಿ ನಟಿಸಿ ಕನ್ನಡ ಚಿತ್ರರಸಿಕರಲ್ಲಿ ಭರವಸೆ ಮೂಡಿಸಿದ್ದರು. ಇದೀಗ ಚಿರಂಜೀವಿ ಮತ್ತೆ ಬಂದಿದ್ದಾರೆ. ರಾಮು ನಿರ್ಮಿಸುತ್ತಿರುವ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಆದರೆ, ಈ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭ ಎಂದು ತಿಳಿದು ಬಂದಿದೆ.
ತೆಲುಗಿನ ಅಕುಲಶಿವ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಕನ್ನಡ ಚಿತ್ರ. ತೆಲುಗು ಚಿತ್ರೋದ್ಯಮದಲ್ಲಿ ಹಲವು ಹಿಟ್ ಸಿನಿಮಾಗಳನ್ನು ಅವರು ನೀಡಿದ್ದರು.
ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಚಕ್ರಿ ರಾಮು ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಈ ಹಿಂದೆ ಅವರು ವೀರ ಕನ್ನಡಿಗ ಮತ್ತು ಗಿರಿ ಚಿತ್ರಗಳಿಗೆ ಸಂಗೀತ ನೀಡಿ ಯಶಸ್ವಿಯಾಗಿದ್ದರು.
ಚಿತ್ರದ ಉಳಿದ ತಾರಾಗಣ ಮತ್ತು ತಂತ್ರಜ್ಞರ ಶೋಧ ಸಾಗುತ್ತಿದೆ. ಸದ್ಯ ರಾಮು, ತಮ್ಮ ಪತ್ನಿ ಮಾಲಾಶ್ರೀ ಅಭಿನಯದ ವೀರ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.