ಶಂಕರ್ ನಾಗ್ ಚಲನಚಿತ್ರ ತರಬೇತಿ ಕೇಂದ್ರದಲ್ಲಿ ಕಲಿತಂಥ ಎಂಟು ಜನ ವಿದ್ಯಾರ್ಥಿಗಳಾದ ಪ್ರವೀಣ್, ಸ್ವಾಮಿ, ಅರವಿಂದ್, ವಿನೋದ್, ಪ್ರಕಾಶ್ ಕುಮಾರ್, ರವಿಕುಮಾರ್, ಮಹದೇಶರಾಜ್ ಹಾಗೂ ಉಮಾ ಮಹೇಶ್ವರಿ ಮತ್ತಿತರರು ಸೇರಿ ಒಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲಿ ಅದೊಂದು ವಿಶೇಷವೇ ಸರಿ.
ಚಿತ್ರದ ಹೆಸರು 'ಟಿಕ್ ಟಿಕ್' ಅಂತ. ಇದರ ಕಥೆ ಕುತೂಹಲ ಮತ್ತು ಥ್ರಿಲ್ಲಿಂಗ್‌ನಿಂದ ಕೂಡಿದೆಯಂತೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಿಸುತ್ತಿರುವವರು ಸಂಸ್ಥೆಯ ನಿರ್ದೇಶಕರಾದ ಓಂಪ್ರಕಾಶ್ ನಾಯಕ್. ಅದಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ.
ನಾಯಕ ಕಂ ಖಳನಾಯಕನಾಗಿ ಓಂಪ್ರಕಾಶ್, ನಾಯಕಿಯಾಗಿ ಬಿ.ಟಿ.ಲಲಿತಾನಾಯಕ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಶ್ವನಾಥ್ ಚೌಧರಿ ಛಾಯಾಗ್ರಹಣ, ರಾಬಿನ್ ಸಂಗೀತ ನಿರ್ದೇಶನವಿದೆ.