ಇತ್ತೀಚಿನ ದಿನಗಳಲ್ಲಿ ಬರಿಯ ಪ್ರೌಢ ಪೋಷಕ ಪಾತ್ರಗಳಲ್ಲೇ ನಟಿಸಿ ಸೈ ಎನಿಸಿಕೊಳ್ಳುತ್ತಿದ್ದ ಅನಂತನಾಗ್ ಈಗ ಹೀರೋ. ಪತ್ರಕರ್ತ ಸದಾಶಿವ ಶೆಣೈ ನಿರ್ದೇಶನದ ಪ್ರಾರ್ಥನೆ ಚಿತ್ರದಲ್ಲಿ ಅನಂತ್ ಪೂರ್ಣ ಪ್ರಮಾಣದ ನಾಯಕರಾಗಿ ನಟಿಸುತ್ತಿದ್ದಾರೆ. ಅವರ ಜೊತೆಯಲ್ಲಿ ನಟಿ ಸುಧಾರಾಣಿ ಕೂಡ ನಟಿಸುತ್ತಿದ್ದಾರೆ. ಈ ಹಿಂದೆ ಅನಂತ್ ಮತ್ತು ಸುಧಾ ಜೋಡಿಯಲ್ಲಿ ಹಲವು ಹಾಸ್ಯಮಯ ಚಿತ್ರಗಳು ತೆರೆ ಕಂಡು ಪ್ರೇಕ್ಷಕರ ಮನಗೆದ್ದಿದ್ದವು.
MOKSHA
ಶೆಣೈ ಕಥೆ ಹೇಳಿದಾಗ ಅನಂತ್, ಆ ಪಾತ್ರಕ್ಕೆ ಯುವ ನಟರು ಸೂಕ್ತ ಎಂದಿದ್ದರಂತೆ. ಶೆಣೈ, ಕಾಡಿ ಬೇಡಿ ಕೊನೆಗೂ ಪ್ರಾರ್ಥನೆ ಚಿತ್ರಕ್ಕೆ ಅನಂತ್ ಅವರನ್ನು ಒಪ್ಪಿಸಿದ್ದಾರೆ. ನಿಜ ಹೇಳಬೇಕೆಂದರೆ ಶೆಣೈ ತನ್ನ ಸ್ನೇಹಿತನೆಂದು ಈ ಚಿತ್ರಕ್ಕೆ ಅನಂತ್ ಸಹಿ ಹಾಕಲಿಲ್ಲವಂತೆ. ಕಥೆ, ಚಿತ್ರಕಥೆ ಹಿಡಿಸಿದ ಕಾರಣ ಅನಂತ್ ಪ್ರಾರ್ಥನೆಗೆ ಮುಂದಾಗಿದ್ದಾರಂತೆ.
ಇದು ಕನ್ನಡ ಉಳಿಸುವ ಸಿನಿಮಾ. ಹಾಗಂತ ಪೂರ್ಣ ಆರ್ಟ್ ಮೂವಿ ಅಲ್ಲ, ಕಮರ್ಷಿಯಲ್ ಸಿನಿಮಾನೂ ಅಲ್ಲ ಎನ್ನುವುದು ಸದಾಶಿವ ಸೆಣೈ ಅವರ ಅಂಬೋಣ.