ರಕ್ತಕಣ್ಣೀರಿನ ಕಾಂತಾ ಖ್ಯಾತಿಯ ನಾಯಕಿ ನಟಿ ರಮ್ಯಕೃಷ್ಣ ಮತ್ತೆ ಕನ್ನಡದತ್ತ ಮುಖ ಮಾಡಿದ್ದಾರೆ. ರಾಮ್ ನಾರಾಯಣ್ ನಿರ್ದೇಶನದ ಬೊಂಬಾಟ್ ಕಾರ್ ಚಿತ್ರದಲ್ಲಿ ರಮ್ಯಕೃಷ್ಣ ನಟಿಸುತ್ತಿದ್ದಾರೆ.
ಚಿತ್ರದಲ್ಲಿ ರಮ್ಯಕೃಷ್ಣರದ್ದು ದೇವತೆಯ ಪಾತ್ರ ಎಂಬ ಸುದ್ದಿಯೂ ಇದೆ. ಈವರೆಗೆ ತಮ್ಮ ಬಹುತೇಕ ಚಿತ್ರಗಳಿಗೆ ದೇವತೆಯ ಹೆಸರಿಡುತ್ತಿದ್ದ ನಿರ್ದೇಶಕ ರಾಮ್ ನಾರಾಯಣ್ ಈ ಬಾರಿ ಬೊಂಬಾಟ್ ಕಾರ್ ಎಂಬ ಬೊಂಬಾಟ್ ಹೆಸರಿಟ್ಟಿರುವುದು ಎಲ್ಲರಿಗೂ ಸೋಜಿಗ ತಂದಿದೆ. ಇವರ ಶಾಂಭವಿ, ಭೈರವಿ, ದಾಕ್ಷಾಯಿಣಿ, ಭುವನೇಶ್ವರಿ ಮತ್ತಿತರ ಚಿತ್ರಗಳೆಲ್ಲ ದೇವತೆಗಳ ಹೆಸರನ್ನೇ ಹೊಂದಿರುವಂತಹುಗಳು ಎಂಬುದನ್ನಿಲ್ಲಿ ನೆನಪಿಸಬಹುದು. ಆದರೂ ಈ ಚಿತ್ರ ಪೌರಾಣಿಕ ಕಥಾ ಹಂದರ ಹೊಂದಿದೆಯೇ ಎಂಬ ಬಗ್ಗೆ ಖಚಿತ ಮಾಹಿತಿಗಳಿಲ್ಲ.
ಒಟ್ಟಾರೆ ರಮ್ಯಕೃಷ್ಣರಂತೂ ಕಾರಲ್ಲಿ ಕೂತಿದ್ದಾರೆ. ಆಕ್ಸಿಲೇಟರ್ ಒತ್ತೋದಷ್ಟೇ ಬಾಕಿ. ರಮ್ಯಕೃಷ್ಣ ಇರೋದ್ರಿಂದ ಕಾರು ಓಡಬಹುದು ಎಂದು ಈಗಾಗಲೇ ಹಲವರು ಮಾತಾಡಿಕೊಳ್ಳುತ್ತಿದ್ದಾರೆ.