ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜನವರಿಯಲ್ಲಿ ಬೆಳ್ಳಿತೆರೆಗಪ್ಪಳಿಸಲಿದೆ ಆಪ್ತರಕ್ಷಕ! (Aaptha Rakshaka | P.Vasu | Aptha Mitra | Dr.Vishnuvardhan)
ಸುದ್ದಿ/ಗಾಸಿಪ್
Bookmark and Share Feedback Print
 
Aptharakshaka
PR
'ಆಪ್ತಮಿತ್ರ' ಖ್ಯಾತಿಯ ಪಿ.ವಾಸು ಅವರ ಬಹುನಿರೀಕ್ಷಿತ 'ಆಪ್ತರಕ್ಷಕ' ಚಿತ್ರ ಮುಂದಿನ ಜನವರಿ ತಿಂಗಳಲ್ಲಿ ಥಿಯೇಟರ್‌ಗಳಿಗೆ ಅಪ್ಪಳಿಸಲಿದೆ. ಆಪ್ತಮಿತ್ರ ಚಿತ್ರಕ್ಕೆ ಭಾರೀ ಕರತಾಡನ ಗಿಟ್ಟಿಸಿದ್ದ ಪಿ.ವಾಸು ಬಹಳ ಕಾಲದ ನಂತರ ಆಪ್ತಮಿತ್ರದ ಎರಡನೇ ಅವತರಣಿಕೆಯೆಂದೇ ಆಪ್ತರಕ್ಷಕಕ್ಕೆ ಭಾರೀ ಪ್ರಚಾರ ಗಿಟ್ಟಿಸುತ್ತಿದ್ದಾರೆ.

ಪಿ.ವಾಸು ನಿರ್ದೇಶನದ ದ್ವಾರಕೀಶ್ ನಿರ್ಮಾಣದ ಆಪ್ತಮಿತ್ರ ಚಿತ್ರ ಹಿಂದೆ ಭಾರೀ ಯಶಸ್ಸು ಗಳಿಸಿತ್ತು. ಕನ್ನಡ ಸಿನಿಮಾ ಇತಿಹಾಸದಲ್ಲಿ ದಾಖಲೆ ಬರೆದ ಈ ಚಿತ್ರ ಹಲವು ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿತ್ತು. ವಿಷ್ಣುವರ್ಧನ್, ಸೌಂದರ್ಯಾ, ರಮೇಶ್ ತಾರಾಗಣವಿದ್ದ ಈ ಚಿತ್ರವನ್ನು ಪಿ.ವಾಸು ಅವರು ತಮಿಳಿನಲ್ಲೂ ರಜನೀಕಾಂತ್, ಜ್ಯೋತಿಕಾ ತಾರಾಗಣಗಲ್ಲಿ ನಿರ್ದೇಶಿಸಿ ಅಲ್ಲೂ ಜನಪ್ರಿಯತೆ ಪಡೆದಿದ್ದರು. ಈಗ ಮತ್ತೆ ಕನ್ನಡಕ್ಕೆ ಮರಳಿರುವ ಪಿ.ವಾಸು ಜನವರಿಯಲ್ಲಿ ಆಪ್ತರಕ್ಷಕದ ಮೂಲಕ ಚಿತ್ರರಸಿಕರಿಗೆ ರಸದೌತಣ ನೀಡಲಿದ್ದಾರೆ. ಆದರೆ ಪಿ.ವಾಸು ಅವರೇ ಈ ಹಿಂದೆ ಇದು ಆಪ್ತಮಿತ್ರದ ಎರಡನೇ ಅವತರಣಿಕೆಯಲ್ಲ ಎಂದಿದ್ದರು. ಆದರೂ ಇನ್ನೂ ಇದು ಆಪ್ತಮಿತ್ರ ಎರಡೇ ಭಾಗವೆಂದೇ ಕರೆಯಲ್ಪಡುತ್ತಿರುವುದು ವಿಶೇಷ.

ಎಂಟು ಕೋಟಿ ರೂ ವೆಚ್ಚ: ಕಳೆದ ಮಾರ್ಚ್ ತಿಂಗಳಲ್ಲೇ ಆಪ್ತರಕ್ಷಕ ಚಿತ್ರದ ಶೂಟಿಂಗ್ ಮುಗಿದಿದ್ದರೂ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕಾಗಿ ವಾಸು ಬರೋಬ್ಬರಿ ಎಂಟು ತಿಂಗಳು ತೆಗೆದುಕೊಂಡಿದ್ದಾರೆ. ಚಿತ್ರವನ್ನು ಎಂಟು ಕೋಟಿ ರೂಪಾಯಿಗಳ ಭಾರೀ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಈ ಚಿತ್ರ ಬಿಡುಗಡೆಯ ನಂತರ ಜನರ ಪ್ರತಿಕ್ರಿಯೆ ನೋಡಿ ತಮಿಳಿನಲ್ಲೂ ರಿಮೇಕ್ ಮಾಡುವ ಇರಾದೆಯಿದೆ ಎಂದು ವಾಸು ಹೇಳಿದ್ದಾರೆ.

ಗ್ರಾಫಿಕ್ಸ್ ಕ್ಸೈಮ್ಯಾಕ್ಸ್: ವಿಷ್ಣುವರ್ಧನ್, ವಿಮಲಾ ರಾಮನ್ ಮತ್ತಿತರ ತಾರಾಗಣವಿರುವ ಆಪ್ತರಕ್ಷಕದಲ್ಲಿ ಕ್ಲೈಮ್ಯಾಕ್ಸನ್ನು ಅದ್ಭುತವಾಗಿ ಮಾಡಲಾಗಿದೆಯಂತೆ, ವಾಸು ಅವರೇ ಹೇಳುವಂತೆ, ಕ್ಲೈಮ್ಯಾಕ್ಸ್‌ನಲ್ಲಿ ಭಾರೀ ಗ್ರಾಫಿಕ್ಸ್‌ ಹಾಗೂ ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದ್ದು, ಚಿತ್ರದ ದೃಶ್ಯಗಳು ಖಂಡಿತ ಮನಸೆಳೆಯುವಂತಿದ್ದು ಮೋಡಿ ಮಾಡುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾವುದಕ್ಕೂ ಜನವರಿವರೆಗೆ ಕಾಯಲೇಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಆಪ್ತರಕ್ಷಕ, ಆಪ್ತಮಿತ್ರ, ಪಿವಾಸು