ಕಳೆದ ವರ್ಷ 'ಸೈಕೋ' ಹೆಸರಿನ ಚಿತ್ರ ಬಂದು ಹೋಗಿದ್ದು ಎಲ್ಲರಿಗೂ ತಿಳಿದ ವಿಷಯ. ಬರುವ ವರ್ಷ ಮತ್ತೋರ್ವ ಸೈಕೋ ಬೆಳ್ಳಿತೆರೆಗೆ ಬರಲು ತವಕಿಸುತ್ತಿದ್ದಾನೆ. ಚಿತ್ರದ ಹೆಸರು 'ಸಲಗ'. 'ದಿ ಸೈಕೋ ಮ್ಯಾನ್' ಎನ್ನುವುದು ಅದರ ಅಡಿಬರಹ.
ಡಿಸೆಂಬರ್ 11ರಿಂದ ಇದರ ಚಿತ್ರೀಕರಣ ಪ್ರಾರಂಭ. ಹಳೆಯ `ಸೈಕೋ' ಚಿತ್ರದಂತೆ ಇಲ್ಲಿಯೂ ಹೊಸಬರದ್ದೆ ಕಾರುಬಾರು. ಶ್ರೀಮತಿ ರಮಾ ಮತ್ತು ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪ್ರಾಣ್ ನಿರ್ದೇಶನ ನೀಡಲಿದ್ದಾರೆ. ಕಿರಣ್ ಎಂಬ ಹೊಸ ಮುಖವನ್ನು ಈ ಚಿತ್ರದಲ್ಲಿ ನಾಯಕನಾಗಿ ಪರಿಚಯಿಸಲಾಗುತ್ತಿದೆ.
ಆಶಾ ತ್ರಿಪಾಟಿ ಇದರ ನಾಯಕಿ ಈಕೆಗೂ ಕೂಡ ನಟನೆ ಹೊಸದು. ಚೈತ್ರ, ಪ್ರಜ್ವಲ್, ಮಹೇಶ್ ಅವರುಗಳೊಂದಿಗೆ ದಯಾನಂದ್, ಬ್ಯಾಂಕ್ ಜನಾರ್ದನ್, ಶೋಭರಾಜ್, ಸತ್ಯಜಿತ್, ಕುಣಿಗಲ್ ನಾಗಭೂಷಣ್ ಮುಂತಾದ ಅಪೂರ್ವ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.
ಈ ಚಿತ್ರಕ್ಕೆ ಸಂಗೀತ ಮಧುರ, ಛಾಯಾಗ್ರಹಣ ಶಂಕರ್, ಸಂಕಲನ ಪ್ರಕಾಶ್, ಸಂಭಾಷಣೆ ಸಿ.ವಿ ಬ್ರದರ್ಸ್, ಅಲ್ಟಿಮೇಟ್ ಶಿವು-ಕೌರವ ವೆಂಕಟೇಶ್ ಸಾಹಸ ಮತ್ತು ಕತೆ ಹಾಗೂ ಚಿತ್ರಕತೆಯನ್ನು ಸ್ವತಃ ನಿರ್ಮಾಪಕಿ ರಮಾ ರಚಿಸಿದ್ದಾರೆ.