ಪೂಜಾ ಗಾಂಧಿ ಅವರಿಗಿಂತ ರಾಧಿಕಾ ಗಾಂಧಿ ಇದೀಗ ಸಿಕ್ಕಾಪಟ್ಟೆ ಸಂತೋಷದಲ್ಲಿದ್ದಾರೆ. ಕಾರಣ ಕನಸಿನ ರಾಣಿ ಮಾಲಾಶ್ರೀ ಅವರೊಂದಿಗೆ ವೀರ ವನಿತೆ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಅವರಿಗೆ ಲಭಿಸಿದೆ. ಅಕ್ಕ ಪೂಜಾಳಂತೆ ಆಗದಿದ್ದರೂ ಕನ್ನಡದಲ್ಲಿ ಉತ್ತಮ ನಟಿಯಾಗುತ್ತೇನೆ ಎಂಬ ನಂಬಿಕೆ ರಾಧಿಕಾ ಅವರಿಗಿದೆ.
ನಿಜ ಹೇಳಬೇಕೆಂದರೆ ಮೊದಲು ರಾಧಿಕಾಗೆ ಚಿತ್ರರಂಗಕ್ಕೆ ಬರುವ ಮನಸ್ಸಿರಲಿಲ್ಲವಂತೆ. ಪೂಜಾ ಅಭಿನಯಿಸಿದ ಚಿತ್ರಗಳನ್ನು ಕಂಡು ತಾನೂ ಚಿತ್ರಲೋಕಕ್ಕೆ ಬಂದರೆ ಭವಿಷ್ಯದಲ್ಲಿ ಚೆನ್ನಾಗಿರುತ್ತೇನೆ ಎಂಬ ಆಸೆಯಿಂದ ಇಲ್ಲಿಗೆ ಬಂದರಂತೆ.
ಕನ್ನಡ ಚಿತ್ರರಂಗದಲ್ಲಿ ಅಷ್ಟು ಸುಲಭವಾಗಿ ಬೇರೂರಲು ಸಾಧ್ಯವಿಲ್ಲ ಎಂದು ತಿಳಿದ ರಾಧಿಕಾ, ಇಲ್ಲಿಗೆ ಕಾಲಿಡುವ ಮುಂಚೆಯೇ ನಟನೆ ಮತ್ತು ನಾಟ್ಯವನ್ನು ಒಲಿಸಿಕೊಂಡು ಬಂದಿದ್ದರಂತೆ.
ವೀರ ವನಿತೆ ಚಿತ್ರ ಅವರಿಗೆ ಉತ್ತಮ ಬ್ರೇಕ್ ನೀಡುತ್ತದೆ ಎನ್ನುವ ಭರವಸೆ ರಾಧಿಕಾಳದ್ದು. ಈಗಾಗಲೇ ಹೊರರಾಜ್ಯದ ಚಿತ್ರರಂಗದಿಂದ ತುಂಬಾ ಆಫರ್ಗಳು ಬಂದಿದ್ದವಂತೆ. ಅಲ್ಲಿಗೆ ಹೋಗದೆ ಸದ್ಯ ಇಲ್ಲೇ ಇರುವುದಾಗಿ ಹೇಳುತ್ತಾರೆ ಅವರು.