ಕನ್ನಡದ ನಾಯಕಿಯರು ಎಷ್ಟೇ ಸುರಸುಂದರಿಯರೇ ಆಗಿರಲಿ, ನಮ್ಮ ನಿರ್ಮಾಪಕ ಮತ್ತು ನಿರ್ದೇಶಕರು ಮಾತ್ರ ಅವರಲ್ಲಿ ಗ್ಲಾಮರ್ ಇಲ್ಲ ಎಂದೇ ದೂರುತ್ತಾರೆ. ಹೀಗಾಗಿ ಪರಭಾಷಾ ನಟಿಯರ ನೀರಿನಂತೆ ಕನ್ನಡಕ್ಕೆ ಹರಿದು ಬರುತ್ತಿದ್ದಾರೆ. ಇದರಿಂದ ಮುನಿಸಿಕೊಂಡ ನಮ್ಮ ನಟಿಯರು ತಮಿಳು, ತೆಲುಗು ಚಿತ್ರರಂಗದ ಕಡೆಗೆ ಪಾದ ಬೆಳೆಸಿದ್ದಾರೆ.
ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಕನ್ನಡದ ನಟಿಯರಿಗೆ ನಮ್ಮಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳು ಸಿಗುತ್ತಿಲ್ಲ. ಅವಕಾಶ ಕೊಡಿ ಎಂದು ಅಂಗಲಾಚಿದರೂ ನಿರ್ಮಾಪಕ, ನಿರ್ದೇಶಕರು ಕೇಳಿಸಿಕೊಳ್ಳುವುದೇ ಇಲ್ಲ ಎಂಬುದು ಇವರ ದೂರು.
ಕನ್ನಡದ ಹುಡುಗಿಯರು ಯಾರಿಗೇನೂ ಕಡಿಮೆ ಇಲ್ಲ. ಆದರೆ ನಮ್ಮ ನಿರ್ದೇಶಕ, ನಿರ್ಮಾಪಕರಿಗೆ ಅದೇಕೆ ಅರ್ಥವಾಗುತ್ತಿಲ್ಲವೋ ಗೊತ್ತಾಗುತ್ತಿಲ್ಲ. ಇಲ್ಲಿ ಸರಿಯಾದ ಅವಕಾಶಗಳು ಸಿಕ್ಕಿದ್ದರೆ ಬೇರೆ ಚಿತ್ರರಂಗದ ಕಡೆ ನಾವೇಕೆ ಮುಖ ಮಾಡಬೇಕಿತ್ತು. ಅದಕ್ಕೆ ಈಗ ತಮಿಳು, ತೆಲುಗು ಚಿತ್ರಗಳಲ್ಲಿ ನಾವು ನಟಿಸುತ್ತಿದ್ದೇವೆ ಎನ್ನುತ್ತಾರೆ ನಮ್ಮ ನಟೀಮಣಿಯರು.