ಸಿನಿಮಾದ ಪೋಸ್ಟರ್ಗಳತ್ತ ಕಣ್ಣು ಹಾಯಿಸಿದಾಗ ಅವು ಮನಸೂರೆಗುಳ್ಳುವಂತಿರಬೇಕು. ಪೋಸ್ಟರ್ಗಳಿಂದಲೂ ಪ್ರೇಕ್ಷಕರನ್ನು ಥಿಯೇಟರ್ ಕಡೆಗೆ ಆಕರ್ಷಿಸಬಹುದು ಎಂದು ಇದೀಗ ಸಾಬೀತುಪಡಿಸಲು ಹೊರಟಿದೆ ಪೆರೋಲ್. ಹಿಂದೆ, ಇದೇ ಚಿತ್ರದ ಚಿತ್ರೀಕರಣದ ಪ್ರಾರಂಭದಲ್ಲೇ ನಾಯಕರುಗಳು ಪರಸ್ಪರ ಗುದ್ದಾಡಿಕೊಂಡು ವಿವಾದ ಸೃಷ್ಟಿಸಿಕೊಂಡು ದೊಡ್ಡ ಸುದ್ದಿಯನ್ನೇ ಮಾಡಿದ್ದರು. ಅದು ಹಳೆ ಕಥೆ. ಇದೀಗ ಈ ಚಿತ್ರದ ಪೋಸ್ಟರ್ಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ಪ್ರಾರಂಭವಾಗಿದೆ.
ಪೆರೊಲ್ಗೆ ಈಗಾಗಲೇ ಡಬ್ಬಿಂಗ್ ಕಾರ್ಯ ಮುಗಿದಿದ್ದು, ರಾಜ್ಯದ ಕೀರೀಟವೆನಿಸಿದ ಬೀದರ್ ಜಿಲ್ಲೆಯಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. 'ನೀನ್ಯಾರೆ' ಚಿತ್ರದ ನಂತರ ಸೂರಜ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಅಂಬಾರಿ'ಯ ವಯ್ಯಾರಿ ಸುಪ್ರಿತಾ ಕೂಡ ಈ ಚಿತ್ರದಲ್ಲಿ ತಮ್ಮ ಮುದ್ದಾದ ಮೊಗವನ್ನು ತೋರಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು, ಹೊಸಬರ ಕೌಶಲ್ಯವನ್ನು ಚಿತ್ರದಲ್ಲಿ ನೋಡಬಹುದು ಎನ್ನುತ್ತಾರೆ ನಿರ್ದೇಶಕ ಶೇಖರ್. ಈ ವರ್ಷ ಹೊಸ ಹುಡುಗರ ಕಾರುಬಾರು ನಡೆಯಲಿಲ್ಲ, ಬರುವ ವರ್ಷವಾದರೂ ಅವರ ಜಾದೂ ಹೇಗಿರುತ್ತದೆ ಎಂಬುದನ್ನು ಕಾದೇ ನೋಡಬೇಕಿದೆ.