ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ಶ್ರೀಹರಿಕಥೆ ಅಡಿಯೋ ಕ್ಯಾಸೆಟ್ ಇತ್ತೀಚೆಗೆ ಬಿಡುಗಡೆಗೊಂಡಿದೆ. ಬಿಡುಗಡೆಯ ಬಳಿಕ ಮಾತನಾಡಿದ ದಯಾಳ್, ಚಿತ್ರದಲ್ಲಿ ಹೊಸ ಪ್ರತಿಭೆ ಸಮೀರ್ ಕುಲಕರ್ಣಿ ಅವರ ಸಂಗೀತ ನಿರ್ದೇಶನ ಸೊಗಸಾಗಿ ಮೂಡಿಬಂದಿದೆ. ಸಮೀರ್ ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತಮ ಸಾಧನೆ ತೋರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಟಿ ಪೂಜಾ ಗಾಂಧಿ ಮಾತನಾಡಿ, ಚಿತ್ರದ ಎಲ್ಲ ಹಾಡುಗಳನ್ನು ಡಿಫರೆಂಟ್ ಆಗಿ ಶೂಟಿಂಗ್ ಮಾಡಲಾಗಿದೆ. ಬೆಂಗಳೂರಿನ ಶಾಪಿಂಗ್ ಮಾಲ್ನಲ್ಲಿ ಚಿತ್ರೀಕರಿಸಿದ ಹಾಡಿನ ಸ್ಟೈಲ್ ಹಾಗೂ ಮಂಗಳೂರು ಬೀಚ್ನಲ್ಲಿ ಚಿತ್ರೀಕರಿಸಿದ ಸ್ಟೈಲ್ಗಳು ಅದ್ಭುತವಾಗಿವೆ ಎಂದರು.
ನಟ ಮುರಳಿ ಮಾತನಾಡಿ, ಈವರೆಗೆ ತಾನು ಅಭಿನಯಿಸಿದ ಚಿತ್ರಗಳಿಗಿಂತ ಈ ಚಿತ್ರ ತುಂಬ ವಿಭಿನ್ನವಾದುದು. ಚಿತ್ರದಲ್ಲಿ ನಾನು ಕನ್ನಡಕಧಾರಿಯಾಗಿ ಅಭಿನಯಿಸಿದ್ದೇನೆ. ಈ ಚಿತ್ರ ನನಗೆ ಹೊಸ ಇಮೇಜ್ ಸೃಷ್ಟಿಸಲಿದೆ ಎಂದರು.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಆ ಪಾತ್ರಗಳನ್ನು ಸಹೋದರಿಯರಾದ ಪೂಜಾ ಗಾಂಧಿ ಹಾಗೂ ರಾಧಿಕಾ ಗಾಂಧಿ ನಿಭಾಯಿಸಲಿದ್ದಾರೆ. ಪೂಜಾ ಗಾಂಧಿ ನೆಗೆಟಿವ್ ಪಾತ್ರದಲ್ಲಿ ಮಿಂಚಲಿದ್ದಾರೆ.