ನಿರ್ದೇಶಕ ಸತ್ಯ, ನಟ ಸುದೀಪ್ ಅವರಿಗಾಗಿ ಮತ್ತೊಂದು ಚಿತ್ರವನ್ನು ಮಾಡಹೊರಟಿದ್ದಾರೆ. ಗೂಳಿ ಚಿತ್ರದ ನಂತರ ಮತ್ತೊಮ್ಮೆ ಈ ಜೋಡಿ ಒಂದಾಗಿದೆ. ನೀವು ಅಂದುಕೊಂಡಂತೆ ಖಂಡಿತವಾಗಿ ಇದು ರಿಮೇಕ್ ಚಿತ್ರ. ತೆಲುಗಿನಲ್ಲಿ ನಾಗಾರ್ಜುನ ಹಾಗೂ ಅನುಷ್ಕಾ ನಟಿಸಿದ್ದ ಮಾಸ್ ಚಿತ್ರವನ್ನು ಇಲ್ಲಿ ಭಟ್ಟಿ ಇಳಿಸಲಾಗುತ್ತಿದೆ.
ಎನ್. ಕುಮಾರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಸುದೀಪ್ ಅವರಿಗೆ ನಾಯಕಿಯಾಗಿ ಪ್ರಣೀತ ಕಾಣಿಸಿಕೊಳ್ಳಲಿದ್ದಾರೆ. ಪ್ರಣೀತ ಈಗಾಗಲೇ ದರ್ಶನ್ ಜೊತೆಗೆ ಪೊರ್ಕಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಕೆ ತುಂಬಾ ಅದೃಷ್ಟವಂತೆ. ಯಾಕೆಂದರೆ ತನ್ನ ಮೊದಲ ಚಿತ್ರ ಬಿಡುಗಡೆ ಆಗುವುದಕ್ಕೆ ಮುಂಚೆಯೇ ಮತ್ತೊಂದು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.
ಶೂನ್ಯ ಮಾಸ ಮುಗಿದ ತಕ್ಷಣ ಈ ಚಿತ್ರ ಸೆಟ್ಟೇರಲಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಸತ್ಯ, ನಟ ಸುದೀಪ್ ಅವರಿಗೆ ಮತ್ತೊಮ್ಮೆ ಮಚ್ಚು ಕೈಗೆ ಕೊಡುವುದು ಖಂಡಿತ.