ಇದೀಗ ನಟಿ ಹರಿಪ್ರಿಯಾ ಸಖತ್ ಸಂತೋಷದಲ್ಲಿದ್ದಾರೆ. ಅವರೀಗ ಸಿಕ್ಕಾಪಟ್ಟೆ ಭಾರೀ ಬಜೆಟ್ ಚಿತ್ರವಾದ 'ನಂದೇ'ಯಲ್ಲಿ ನಟಿಸುತ್ತಿದ್ದಾರೆ. ನುರಿತ ತಂತ್ರಜ್ಞರು ಕೆಲಸ ಮಾಡುತ್ತಿರುವ ಈ ಚಿತ್ರದ ನಾಯಕನಟ ಮುರಳಿ. ಸುನಿಲ್ ಬಾಬು, ರವಿವರ್ಮ ಅವರುಗಳೊಂದಿಗೆ ಕೆಲಸ ಮಾಡಲು ಅದೃಷ್ಟ ಮಾಡಿರಬೇಕೆನ್ನುತ್ತಾರೆ ಹರಿಪ್ರಿಯಾ.
ಚಿತ್ರದ ನಿರ್ದೇಶಕ ಪ್ರಶಾಂತ್, ಹರಿಪ್ರಿಯಾ ಅವರಲ್ಲಿದ್ದ ಕಲೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರಂತೆ. ಕಳ್ಳರ ಸಂತೆಯಲ್ಲಿ ಹರಿಪ್ರಿಯಾಳಿಗೆ ದೇಶಪ್ರೇಮಿಯ ಪಾತ್ರ. ಈ ನಟಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ ಯಾವ ಚಿತ್ರಗಳೂ ಹೆಸರು ಮಾಡಲಿಲ್ಲ. ನಿರೀಕ್ಷೆಯಿಟ್ಟಿದ್ದ ಈ ಸಂಭಾಷಣೆ ಕೂಡಾ ಕೈಕೊಟ್ಟಿತು.
ಈ ಹೊಸ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವರಿಗೊಂದು ಸ್ಥಾನ ಲಭ್ಯವಾಗುವುದೇ ಎಂದು ಕಾದು ನೋಡಬೇಕಿದೆ.