ಜಗ್ಗೇಶ್ ಜೊತೆ 'ಲಿಫ್ಟಿ'ನಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು!
MOKSHA
ಚಿತ್ರದಲ್ಲಿ ರಾಜಕೀಯ ಸನ್ನಿವೇಶಗಳು ಬರುವುದು ಸಾಮಾನ್ಯ. ಹಿಂದೆ ತಯಾರಾಗುತ್ತಿದ್ದ ಪೋಲಿಸ್ ಚಿತ್ರಗಳಲ್ಲಂತೂ ರಾಜಕೀಯದ ಪ್ರಸ್ತಾಪ ಇರಲೇಬೇಕೆಂಬ ಅಲಿಖಿತ ನಿಯಮವಿತ್ತು. ಆದರೆ ನಿಜ ಜೀವನದಲ್ಲಿ ರಾಜಕಾರಿಣಿಗಳು ಸಿನಿಮಾದಲ್ಲಿ ನಟಿಸಿದ್ದು ಅಪರೂಪ.
MOKSHA
ಮೊನ್ನೆ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕ್ಯಾಮೆರಾ ಎದುರು ನಿಂತು ಸುದ್ದಿಯಾಗಿದ್ದಾರೆ. ಜಗ್ಗೇಶ್ ನಟಿಸಿದ 'ಲಿಫ್ಟ್ ಕೊಡ್ಲಾ' ಚಿತ್ರದಲ್ಲಿ ಅವರು ಗೃಹ ಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕಟ್ಟಾ ಅಭಿನಯದ ಎರಡು ದೃಶ್ಯಳನ್ನು ಚಿತ್ರೀಕರಿಸಲಾಯಿತು. ಜನರನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹಮಂತ್ರಿ, ಡಿಜಿಪಿ ಅವರಿಗೆ ಆದೇಶಿಸುವ ಸನ್ನಿವೇಶದಲ್ಲಿ ಕಟ್ಟಾ ಅಭಿನಯಿಸಿದ್ದಾರೆ.
ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಬೆಳ್ಳಿತೆರೆಗೆ ಕರೆತರುವಲ್ಲಿ ನಟ ಜಗ್ಗೇಶ್ ಪಾತ್ರ ಮಹತ್ವದ್ದು ಅಂದರೆ ತಪ್ಪಾಗಲಾರದು.