ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಐಂದ್ರಿತಾ ರೇ ಪ್ರಕರಣ ಇದೀಗ ಹಲವು ಸಂಗತಿಗಳ ಮೇಲೆ ಬೆಳಕು ಚೆಲ್ಲಿದೆ. ಐಂದ್ರಿತಾ ರೇ ನಿರ್ದೇಶಕ ನಾಗತಿಹಳ್ಳಿ ಅವರು ಸುಮ್ಮಸುಮ್ಮನೇ ಅಗತ್ಯವಿಲ್ಲದ ಸಂದರ್ಭದಲ್ಲಿಯೂ ಮೈಕೈ ಮುಟ್ಟುತ್ತಾರೆ ಎಂದು ದೂರಿದ್ದರು. ಆದರ ಪ್ರಕರಣ ಹೆಚ್ಚು ದೈಹಿಕ ಹಲ್ಲೆ (ಕಪಾಳಮೋಕ್ಷ) ಯ ಮೇಲೆಯೇ ಗಿರಕಿ ಹೊಡೆದುದಿಂದ ಆ ವಿಷಯ ಅಲ್ಲಿಗೇ ತಣ್ಣಗಾಯಿತು. ಆಗ ಎದ್ದ ಪ್ರಶ್ನೆ ನಾಯಕಿಯರನ್ನು ಚಿತ್ರದ ಶೂಟಿಂಗ್ ಸಂದರ್ಭ ನಿಜಕ್ಕೂ ಹೇಗೆ ನಡೆಸಿಕೊಳ್ಳುತ್ತಾರೆ? ಎಂದು.
WD
ವಿಚಿತ್ರವೆಂದರೆ, ಹಲವು ಕನ್ನಡದ ನಟಿಯರು ತಮಗೆ ಶೂಟಿಂಗ್ ಸೆಟ್ಟಿನಲ್ಲಾದ ಕೆಟ್ಟ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಗಾಳಿಪಟ ಚಿತ್ರದಲ್ಲಿ ನಧೀ ಧೀಂ ತನ ಎಂದು ಕುಣಿದ ಭಾವನಾ ಎಂಬ ಬೆಡಗಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಕಡಿಮೆ ಕಾಣಿಸಿಕೊಂಡೇ ಇಲ್ಲ. ಈಕೆಗೂ ಇಂಥ ಕೆಟ್ಟ ಅನುಭವವಿದೆಯಂತೆ. ಇವರು ಗಾಳಿಪಟದ ನಂತರ ಚಿತ್ರವೊಂದಕ್ಕೆ ಸಹಿ ಹಾಕುವ ಮುನ್ನವೇ ತಮ್ಮ ಉಡುಗೆ ಬಗ್ಗೆ ಸ್ಪಷ್ಟವಾಗಿ ಹೇಳದ್ದರಂತೆ. ಜೊತೆಗೆ, ಯಾವುದೇ ಕಾರಣಕ್ಕೂ ತಾನು ತುಂಡುಡುಗೆ ಧರಿಸುವುದಿಲ್ಲವೆಂದೂ ಹೇಳಿದ್ದರು. ಅದಕ್ಕೆ ನಿರ್ದೇಶಕರು ಒಪ್ಪಿದ್ದರು ಕೂಡಾ. ಆದರೆ ಹಾಡೊಂದರಲ್ಲಿ ತುಂಡುಡುಗೆ ತೊಡುವಂತೆ ನಿರ್ದೇಶಕರು ಏಕಾಏಕಿ ಒತ್ತಾಯಿಸಿದರಂತೆ. ಅಂತಿಮವಾಗಿ ಅವರು ಚಿತ್ರೀಕರಣದಿಂದ ಹೊರಗುಳಿದರಂತೆ!
MOKSHA
ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿ ಕನ್ಡ ಮಾತಾಡಬಲ್ಲ ನಟಿಯರ ಪೈಕಿ ಕನ್ನಡತಿಯಾಗಿ ಗಮನ ಸೆಳೆದವರ ಪೈಕಿ ಹರಿಪ್ರಿಯಾರೂ ಒಬ್ಬರು. ಈ ಹರಿಪ್ರಿಯಾ ಬಗ್ಗೆ ಗಾಂಧಿನಗರದ್ಲಲಿ ಸಾಕಷ್ಟು ಆರೋಪಗಳೂ ಇವೆ. ಈಕೆ ಪ್ರೊಫೆಷನಲ್ ಆಗಿ ಕೆಲಸ ಮಾಡಲ್ಲ, ನಿರ್ದೇಶಕರು ಹೇಳೋ ಸಮಯಕ್ಕೆ ಸೆಟ್ಟಿಗೆ ಬರೋದಿಲ್ಲ ಎಂಬೆಲ್ಲ ಮಾತುಗಳು ಹರಿದಾಡುತ್ತಿದ್ದವು. ಆದರೆ ಹರಿಪ್ರಿಯಾ ಈವರೆಗೆ ಮೌನವಾಗಿದ್ದ ಕೆಲವು ವಿಚಾರಗಳನ್ನು ಈಗ ಬಿಚ್ಚಿಟ್ಟಿದ್ದಾರೆ. ಅವರೇ ಹೇಳುವಂತೆ, ಇತ್ತೀಚೆಗೆ ಇವರ ಚಿತ್ರವೊಂದರ ನಿರ್ದೇಶಕ, ಹರಿಪ್ರಿಯಾರನ್ನು ಸದಾ ಅವರೊಂದಿಗೆ ಇರಬೇಕೆಂದು ಅಪೇಕ್ಷಿಸುತ್ತಿದ್ದರಂತೆ. ಚಿತ್ರೀಕರಣದ ಬಿಡುವಿನಲ್ಲೂ ತಮ್ಮ ಪಕ್ಕದಲ್ಲೇ ಹರಿಪ್ರಿಯಾ ಇರಬೇಕೆನ್ನುವುದು ನಿರ್ದೇಶಕರ ಬಯಕೆಯಾಗಿತ್ತಂತೆ.
IFM
ಕನ್ನಡದ ಮೊನಾಲಿಸಾ ಚಿತ್ರದಲ್ಲಿ ಗಮನ ಸೆಳೆದ ತಮಿಳು ಚಿತ್ರರಂಗದ ಬೆಡಗಿ ಸದಾಗೆ ಕೂಡಾ ಇಂಥ ಕೆಟ್ಟ ಅನುಭವಗಳಿವೆ. ಆಕೆ ಚಿತ್ರವೊಂದನ್ನು ಪೂರ್ಣಗೊಳಿಸಿದ ಸಂತರವೂ ಸಂಭಾವನೆಯನ್ನೇ ಸಂದಾಯ ಮಾಡಿರಲಿಲ್ಲವಂತೆ. ಅವರ ವಿಮಾನದ ಟಿಕೆಟ್ ಮತ್ತು ಲಾಡ್ಜ್ ಬಾಡಿಗೆಗೂ ನಿರ್ಮಾಪಕರು ಹಣ ಕೊಡದಿದ್ದುದರ ಪರಿಣಾಮ ಸದಾ ಅವರು ನಡುರಾತ್ರಿಯೇ ಲಾಡ್ಜ್ ಖಾಲಿ ಮಾಡಬೇಕಾಯಿತಂತೆ.
ಹೀಗೇ ಹೇಳುತ್ತಾ ಹೋದರೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಇದು ಬೆಳಕಿಗೆ ಬರುವುದಿಲ್ಲ ಅಷ್ಟೆ.