ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಾಹಸ ನಿರ್ದೇಶಕ ಸರ್ಕಸ್ ಬೋರಣ್ಣ, ನಿರ್ಮಾಪಕ ಚಂದುಲಾಲ್ ಇನ್ನಿಲ್ಲ! (Circus Boranna | Chandulal Jain | Bhuthayyana maga Ayya | Bettale Seve)
ಸುದ್ದಿ/ಗಾಸಿಪ್
Bookmark and Share Feedback Print
 
ಸಾಹಸ ನಿರ್ದೇಶಕ ಸರ್ಕಸ್ ಬೋರಣ್ಣ: ಅನಾರೋಗ್ಯದಿಂದ ಪದ್ಮನಾಭನಗರದ ದೇವೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಹಸ ನಿರ್ದೇಶಕ ಸರ್ಕಸ್ ಬೋರಯ್ಯ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು, ಪತ್ನಿ, ಒಬ್ಬ ಪುತ್ರಿ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸರ್ಕಸ್ ಬೋರಣ್ಣ, ಗಜೇಂದ್ರ, ಶರವೇಗದ ಸರದಾರ, ಮಸಣದ ಹೂ, ರಾಮಾಚಾರಿ ಸೇರಿದಂತೆ ಹಲವು ಚಿತ್ರಗಳಿಗೆ ಸಾಹಸ ನಿರ್ದೇಶನವನ್ನು ಮಾಡಿದ್ದರು. ಲೆಕ್ಕವಿಲ್ಲದಷ್ಟು ಚಿತ್ರಗಳಲ್ಲಿ ಸಾಹಸ ಕಲಾವಿದರಾಗಿ ಅವರು ನಟಿಸಿದ್ದರು.

ದ್ಯೆತ್ಯ ದೇಹ ಹೊಂದಿದ್ದ ಬೋರಣ್ಣ ಮೃದು ಸ್ವಭಾವದವರಾಗಿದ್ದರು. ಟೈಗರ್ ಪ್ರಭಾಕರ್ ಅವರ ಅಭಿಮಾನಿಯಾದ ಬೋರಣ್ಣ, ಅವರಿಗಾಗಿಯೇ ಮೇಯರ್ ಪ್ರಭಾಕರ್ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಆದರೆ ಆ ಚಿತ್ರ ಅವರಿಗೆ ಗೆಲುವು ಕೊಟ್ಟಿರಲಿಲ್ಲ. ಇದೇ ಅವರ ನಿರ್ಮಾಣದ ಕೊನೆಯ ಚಿತ್ರವಾಗಿತ್ತು. ಡಾ.ರಾಜ್, ರಜನೀಕಾಂತ್ ಅವರಂತಹ ಘಟಾನುಘಟಿ ನಟರೊಂದಿಗೆ ಬೋರಣ್ಣ ಅಭಿನಯಿಸಿದ್ದಾರೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ಬೋರಣ್ಣ ನಟಿಸಿ ಖ್ಯಾತಿ ಪಡೆದಿದ್ದರು.

ಕಳೆದ ಮೂರು ವರ್ಷಗಳಿಂದ ಅವರು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೋರಣ್ಣ ನಮ್ಮನ್ನು ಅಗಲಿದ್ದಾರೆ.

ನಿರ್ಮಾಪಕ ಚಂದೂಲಾಲ್ ಜೈನ್: ಭೂತಯ್ಯನ ಮಗ ಅಯ್ಯ, ತಬ್ಬಲಿಯು ನೀನಾದೆ ಮಗನೆ, ಭಕ್ತ ಸಿರಿಯಾಳ, ಬೆತ್ತಲೆ ಸೇವೆ ಮುಂತಾದ ಸುಮಾರು 35 ಯಶಸ್ವೀ, ಪ್ರಸಿದ್ಧ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿಯ ಚಂದೂಲಾಲ್ ಜೈನ್ ಇನ್ನಿಲ್ಲ.

ಗುರುವಾರ ಬೆಳಿಗ್ಗೆ ಸುಮಾರು ಕೊನೆಯುಸಿರೆಳೆದ ಜೈನ್ ಪತ್ನಿ ಲೀಲಾ ಹಾಗೂ ಮಕ್ಕಳಾದ ರಾಜಕುಮಾರ್ ಮತ್ತು ರೋಹಿತ್‌ರನ್ನು ಅಗಲಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದರೂ ಜೈನ್ ಬಳಿ ಸ್ವಂತ ಮನೆಯೇ ಇರಲಿಲ್ಲ. ಜೈನ್ ಅವರ ಈ ಪರಿಸ್ಥಿತಿ ನೋಡಿ ಸ್ವತಃ ಪಾರ್ವತಮ್ಮ ರಾಜ್‌ಕುಮಾರ್ ಅವರು ಜೈನ್ ಅವರಿಗೊಂದು ಸೈಟು ಕೊಡಿ ಅಂತ ಬಿಡಿಎಗೆ ಮನವಿ ಮಾಡಿಕೊಂಡಿದ್ದರು.

ಜೈನ್ ಅವರಲ್ಲಿ ಅದ್ಭುತ ಕನ್ನಡ ಪ್ರೀತಿಯಿತ್ತು. ಈ ಬಗ್ಗೆ ಅಂದು ಸ್ವತಃ ವರನಟ ರಾಜ್‌ಕುಮಾರ್ ಅಚ್ಚರಿಪಟ್ಟಿದ್ದರು. ಇತ್ತೀಚೆಗೆ 74ರ ಹುಟ್ಟುಹಬ್ಬ ಆಚರಿಸಿದ ಸಂದರ್ಭದಲ್ಲಿ ಅವರು ತಾವು ವಿದೇಶಿ ಎಂಬ ಹೆಸರಿನ ಚಿತ್ರ ನಿರ್ಮಿಸಬೇಕೆಂಬ ಕನಸು ಹೊಂದಿರುವುದಾಗಿ ಹೇಳಿದ್ದರು. ಆದರೆ ಆ ಕನಸು ನನಸಾಗಿಸಲು ಅವರಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸರ್ಕಸ್ ಬೋರಣ್ಣ, ಚಂದೂಲಾಲ್ ಜೈನ್, ಭೂತಯ್ಯನ ಮಗ ಅಯ್ಯ, ಬೆತ್ತಲೆ ಸೇವೆ