ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಟ್ಟರ ಸಿನಿಮಾದಿಂದ ಹರಿಪ್ರಿಯಾ ಹೊರಕ್ಕೆ?! (Yograj Bhat | Haripriya | Diganth | Manasare | Praneetha | Porki)
ಸುದ್ದಿ/ಗಾಸಿಪ್
Bookmark and Share Feedback Print
 
Haripriya
MOKSHA
ಮುಂಗಾರು ಮಳೆಯ ನಂತರ ಮನಸಾರೆಗೆ ಉತ್ತಮ ಪ್ರತಿಕ್ರಿಯೆ ಪಡೆದ ಯೋಗರಾಜ ಭಟ್ಟರ ಮುಂಬರುವ ಸಿನಿಮಾದಿಂದ ಹರಿಪ್ರಿಯಾ ಹೊರಗೆ ಬಿದ್ದಿದ್ದಾರೆ ಎಂಬ ಸುದ್ದಿಯೀಗ ಗಾಂಧಿನಗರದಲ್ಲಿ ದಟ್ಟವಾಗಿ ಹಬ್ಬಿದೆ. ಯೋಗರಾಜಭಟ್ಟರು ತಮ್ಮ ಮುಂದಿನ ಸಿನಿಮಾಕ್ಕೆ ಹರಿಪ್ರಿಯಾ ಹಾಗೂ ದಿಗಂತ್ ಜೋಡಿಯನ್ನು ಆಯ್ಕೆ ಮಾಡಿಯಾಗಿತ್ತು. ಹಾಗೂ ಹರಿಪ್ರಿಯಾ ತನಗೆ ಸಿಕ್ಕ ಅವಕಾಶದಿಂದ ಆಕಾಶಕ್ಕೆ ಮೂರೇ ಗೇಣು ಎಂಬಂತೆ ಥ್ರಿಲ್ಲಾಗಿ ಹೋಗಿದ್ದಳು. ಆದರೆ, ಯಾಕೋ ಹರಿಪ್ರಿಯಾಗೆ ಅದೃಷ್ಟ ಕೈಕೊಟ್ಟಿಂತಿದೆ.

ಇತ್ತೀಚೆಗೆ ಯೋಗರಾಜ ಭಟ್ಟರು ಭಾರೀ ಆಸ್ಥೆಯಿಂದ ಸಿದ್ಧಪಡಿಸಿದ್ದ ಚಿತ್ರಕಥೆಗೆ ಹರಿಪ್ರಿಯಾರನ್ನು ಆಯ್ಕೆ ಮಾಡಿದ್ದರು. ಆದರೆ ನಂತರ ಅಂಥದ್ದೇ ಕಥೆ ಹೊಂದಿರುವ ಮಳಯಾಳಂ ಚಿತ್ರ ಹೊರಬಂದಿರುವುದು ಭಟ್ಟರಿಗೆ ತಿಳಿಯಿತು. ಆಮೇಲೆ ಅದೇ ಕಥೆಯನ್ನು ತೆರೆಗೆ ತಂದರೂ ಜನರು ಮಳಯಾಳಂನ ಕಾಪಿ ಹೊಡೆದಿದ್ದೆಂದು ಹೇಳುತ್ತಾರೆಂದು ಯೋಗರಾಜ ಭಟ್ಟರ ದೂರದೃಷ್ಟಿ ಎಚ್ಚರಿಸಿತು. ಹೀಗಾಗಿ ಆ ಕಥೆಯನ್ನು ಕೈಬಿಟ್ಟು ಹೊಸ ಕಥೆ ಸಿದ್ಧಪಡಿಸಿದ್ದಾರೆ. ಈಗ ಆ ಹೊಸ ಕಥೆಯ ನಾಯಕಿ ಪಾತ್ರಕ್ಕೆ ಹರಿಪ್ರಿಯಾ ಸರಿಹೊಂದುವುದಿಲ್ಲ ಎನ್ನುವ ಯೋಚನೆ ಭಟ್ಟರಿಗೆ ಬಂದಿದೆಯಂತೆ.

ಹಾಗಾಗಿ ಭಟ್ಟರು ಈಗಾಗಲೇ ಪೊರ್ಕಿ ಚಿತ್ರದಲ್ಲಿ ನಟಿಸುತ್ತಿರುವ ಪ್ರಣೀತಾ ಮೇಲೆ ಕಣ್ಣಿಟ್ಟಿರುವ ಸುದ್ದಿಯೂ ಬಂದಿದೆ. ಮಾಡೆಲ್ ಆಗಿದ್ದ ಸುಂದರ ಕ್ಯೂಟ್ ನಗು ಹೊಂದಿರುವ ಪ್ರಣೀತಾ ಈಗ ಪೊರ್ಕಿಯಲ್ಲಿ ಬ್ಯುಸಿ. ಅಲ್ಲದೆ ಪೊರ್ಕಿ ಮುಗಿಯುವವರೆಗೆ ಬೇರೆ ಚಿತ್ರಗಳಲ್ಲಿ ನಟಿಸೋದಿಲ್ಲ ಎಂಬ ಕರಾರನ್ನೂ ಪೊರ್ಕಿ ನಿರ್ಮಾಪಕರ ಜೊತೆಗೆ ಮಾಡಿಕೊಂಡಿದ್ದರಂತೆ ಪ್ರಣೀತಾ. ಹಾಗಾಗಿ ಪ್ರಣೀತಾರನ್ನು ಹೇಗೆ ಕರೆತರೋದು ಎಂಬುದು ಭಟ್ಟರಿಗೀಗ ಚಿಂತೆಯಾಗಿದೆ ಎಂಬ ಗುಸು ಗುಸು ಕೂಡಾ ಕೇಳಿಬರುತ್ತಿದೆ.

ಯಾವುದಕ್ಕೂ, ಭಟ್ಟರೇ ಸ್ವತಃ ತನ್ನ ಸಿನಿಮಾ ಬಗ್ಗೆ ಘೋಷಿಸುವವರೆಗೂ ಇಂತಹ ಅಂತೆಕಂತೆಗಳ ಸಂತೆಗೆ ಕೊನೆಯೇ ಇಲ್ಲ. ಭಟ್ಟರು ಪ್ರಕಟಿಸುವವರೆಗೂ ಕಾಯೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯೋಗರಾಜ ಭಟ್, ಹರಿಪ್ರಿಯಾ, ದಿಗಂತ್, ಮನಸಾರೆ, ಪ್ರಣೀತಾ, ಪೊರ್ಕಿ