ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಶಿಶಿರ'ದಲ್ಲಿ ಬಂದ ನಮ್ಮೂರ ಮಂದಾರ ಹೂವು ಪ್ರೇಮಾ (Shishira | Prema | Yashas)
ಸುದ್ದಿ/ಗಾಸಿಪ್
Bookmark and Share Feedback Print
 
Prema
MOKSHA
ದಾಂಪತ್ಯಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ದೂರವಾಗಿದ್ದ ನಟಿ ಪ್ರೇಮಾ ಇದೀಗ ಶಿಶಿರ ಚಿತ್ರದ ಮೂಲಕ ಮತ್ತೊಮ್ಮೆ ಸ್ಯಾಂಡಲ್‌ವುಡ್ಡಿಗೆ ಪಾದಾರ್ಪಣೆ ಮಾಡಿದ್ದಾರೆ.

ಮದುವೆಯ ನಂತರ ನಟನೆಯಿಂದ ದೂರವಿರಬೇಕು ಅಂತ ಪ್ರೇಮಾ ಮೊದಲೇ ಅಂದುಕೊಂಡಿದ್ದರಂತೆ. ವಿವಾಹಕ್ಕೂ ಮುಂಚೆ ಸಿನಿಮಾದ ಹೆಸರಲ್ಲಿ ತಮ್ಮ ಖಾಸಗಿ ಜೀವನವನ್ನು ಮಿಸ್ ಮಾಡಿಕೊಂಡದ್ದು ಅವರ ಈ ನಿರ್ಧಾರಕ್ಕೆ ಕಾರಣವಂತೆ. ಪತಿ, ಅತ್ತೆ, ಮಾವ ಇವರುಗಳ ಪ್ರೀತಿಯ ಆರೈಕೆಯನ್ನು ಅನುಭವಿಸುತ್ತಿರುವಾಗ ನಟಿಸುವ ಯೋಚನೆಯೂ ತಮಗೆ ಬರಲಿಲ್ಲ ಎನ್ನುತ್ತಾರೆ ಅವರು.

ಪ್ರೇಮಾ ಹೇಳುವಂತೆ, ಮದುವೆಯ ನಂತರ ಈ ಹಿಂದೆ ತುಂಬಾ ಆಫರ್‌ಗಳು ಪ್ರೇಮಾರನ್ನು ಅರಸಿಕೊಂಡು ಬಂದಿದ್ದವು. ಆದರೆ ಎಲ್ಲವನ್ನೂ ನಿರಾಕರಿಸಿದರೂ, ಶಿಶಿರ ಪ್ರಯೋಗಾತ್ಮಕ ಚಿತ್ರವಾದ ಕಾರಣ ಅದು ಇಷ್ಟವಾಗಿ ಬೇಡ ಅನ್ನಲು ಮನಸ್ಸಾಗಲಿಲ್ಲ ಎನ್ನುತ್ತಾರೆ ಅವರು.

ಅಂದಹಾಗೆ ಈಗಿನ ಕಳಪೆ ಚಿತ್ರಗಳ ಬಗ್ಗೆ ಪ್ರೇಮಾ ಅವರಿಗೆ ಬೇಸರವಿದೆ. ಅವರು ಚಿತ್ರರಂಗದಿಂದ ದೂರವಿದ್ದರೂ ತಮ್ಮ ಸಹ ನಟ ನಟಿಯರ ಸಂಪರ್ಕದಲ್ಲಿ ಈಗಲೂ ಇದ್ದಾರಂತೆ. ಉತ್ತಮ ಕಥೆ ಹಾಗೂ ಅದರಲ್ಲಿನ ನನ್ನ ಪಾತ್ರ ಹಿಡಿಸಿದರೆ ನಾನು ಎಂದೆಂದಿಗೂ ನಟಿಸಲು ಸಿದ್ಧ ಎನ್ನುತ್ತಾರೆ ಪ್ರೇಮಾ ಮುಗುಳ್ನಗುತ್ತ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿಶಿರ, ಪ್ರೇಮಾ, ಯಶಸ್