ನಮ್ಮ ಕನ್ನಡದ ನಿರ್ಮಾಪಕರೆಲ್ಲ ಇದೀಗ ಸಿಕ್ಕಾಪಟ್ಟೆ ಸಂತೋಷದಲ್ಲಿದ್ದಾರೆ. ಯಾಕೆಂದರೆ ಅಂತೂ ನಿರ್ಮಾಪಕರ ಸಂಘಕ್ಕೆ ನೂತನ ಕಚೇರಿಯೊಂದು ಸಿಕ್ಕಿಬಿಟ್ಟಿದೆ. ಇಲ್ಲಿಯವರೆಗೂ ಈ ನಿರ್ಮಾಪಕರ ಸಂಘಕ್ಕೆ ಒಂದು ಕಚೇರಿಯ ದಿಕ್ಕಿರಲಿಲ್ಲ. ಇದೀಗ ನಿರ್ಮಾಪಕ ಎಸ್.ವಿ.ಬಾಬು ಅವರ ಎಸ್.ವಿ. ಟವರ್ಸ್ನಲ್ಲಿ ಸುಸಜ್ಜಿತವಾದ ಕಚೇರಿ ಸಿಕ್ಕಿದೆ.
ವೆಸ್ಟ್ ಆಫ್ ಕಾರ್ಡ್ ರಸ್ತೆಯ ವಿ ಬ್ಲಾಕ್ ನಲ್ಲಿರುವ ಎಸ್.ವಿ ಟವರ್ಸ್ನಲ್ಲಿ ಇತ್ತೀಚೆಗೆ ಸಂಘದ ನೂತನ ಕಚೇರಿ ಉದ್ಘಾಟನೆಗೊಂಡಿದೆ. ಈ ನೂತನ ಕಚೇರಿಯನ್ನು ಹಿರಿಯ ನಟ ಅಂಬರೀಶ್ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ನಿರ್ಮಾಪಕರಾದ ಎಚ್.ಎಂ.ಕೆ ಮೂರ್ತಿ, ಬಿ.ಎಂ.ವೆಂಕಟೇಶ್, ಸಿ.ವಿ.ಎಲ್. ಶಾಸ್ತ್ತ್ರಿ ಹಾಗೂ ಬಸಂತ್ ಕುಮಾರ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಪಾರ್ವತಮ್ಮ ರಾಜ್ ಕುಮಾರ್, ಜಯಮಾಲ, ಕೆ.ಸಿ.ಎನ್. ಚಂದ್ರಶೇಖರ್, ಟಿ.ಎಸ್ ನಾಗಭರಣ, ಗಿರೀಶ್ ಮಟ್ಟಣನವರ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.